ಹಿಂದುಗಳ ಸಂಖ್ಯೆ ಕಡಿಮೆಯಿರುವ ಸ್ಥಳದಲ್ಲಿ ಸಾಮಾಜಿಕ ಸಾಮರಸ್ಯ ಹಾಳು: ಕೇಂದ್ರ ಸಚಿವರ ವಿವಾದಿತ ಹೇಳಿಕೆ

By Suvarna Web DeskFirst Published Feb 4, 2018, 7:39 PM IST
Highlights

ನಾದಲ್ಲಿ ಪ್ರತಿ ನಿಮಿಷಕ್ಕೆ 11 ಮಂದಿ ಜನಿಸಿದರೆ ಭಾರತದಲ್ಲಿ 29 ಮಂದಿ ಜನ್ಮತಾಳುತ್ತಿದ್ದಾರೆ. ವೀಶ್ವದಲ್ಲೇ ಭಾರತದ ಜನಸಂಖ್ಯೆ ಶೇ.18ರಷ್ಟಿದೆ

ನವದೆಹಲಿ(ಫೆ.04): ಎಲ್ಲಿಲ್ಲಿ ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತದೆಯೋ ಆ ಸ್ಥಳಗಳಲ್ಲಿ ಸಾಮಾಜಿಕ ಸಾಮರಸ್ಯ ಕದಡುತ್ತದೆ ಎಂದು  ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರಿಂದ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಅವರು,  ಜನಸಂಖ್ಯೆಯನ್ನು ನಿಯಂತ್ರಿಸಲಾಗದಿದ್ದರೆ ಭವಿಷ್ಯದಲ್ಲಿ 10ರಲ್ಲಿ ಓರ್ವನಿಗೆ ಕುಡಿಯಲು ನೀರು ಸಿಗುವುದಿಲ್ಲ 'ಎಂದು ವಿಶ್ವಸಂಸ್ಥೆ ಇತ್ತೀಚಿಗಷ್ಟೆ ಎಚ್ಚರಿಕೆ ನೀಡಿತ್ತು. ಸಾಮಾಜಿಕ ಸಾಮರಸ್ಯ ಹಾಗೂ ಅಭಿವೃದ್ಧಿಗೆ ತೊಡಕಾಗಲು ಹಿಂದುಗಳ ಸಂಖ್ಯೆ ಕಡಿಮೆಯಾಗುವುದು ಪ್ರಮುಖ ಕಾರಣ' ಎಂದಿದ್ದಾರೆ.

ಏರುತ್ತಿರುವ ಜನಸಂಖ್ಯೆ ನಿಮ್ಮ ಬದುಕು ಹಾಗೂ ಶಾಂತಿಗೆ ಭಂಗ ನೀಡುತ್ತದೆ. ಅದೇ ರೀತಿ ಅಭಿವೃದ್ಧಿ ಹಾಗೂ ಸಾಮಾಜಿಕ ಸಾಮರಸ್ಯಕ್ಕೂ ತೊಡಕಾಗುತ್ತದೆ. ಚೀನಾದಲ್ಲಿ ಪ್ರತಿ ನಿಮಿಷಕ್ಕೆ 11 ಮಂದಿ ಜನಿಸಿದರೆ ಭಾರತದಲ್ಲಿ 29 ಮಂದಿ ಜನ್ಮತಾಳುತ್ತಿದ್ದಾರೆ. ವೀಶ್ವದಲ್ಲೇ ಭಾರತದ ಜನಸಂಖ್ಯೆ ಶೇ.18ರಷ್ಟಿದೆ'ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಗಿರಿರಾಜ್ ಸಿಂಗ್ ಅವರು ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಕೆಲವು ತಿಂಗಳ ಹಿಂದೆ ಮುಸ್ಲಿಂಮರು ಬದುಕುತ್ತಿರುವುದು ರಾಮಜನ್ಮಭೂಮಿ ಭಾರತದಲ್ಲಿ ವಿನಃ ಬಾಬರ್ ಜನ್ಮಭೂಮಿಯಲ್ಲ' ಎಂದಿದ್ದರು.

click me!