
ಕೊಚ್ಚಿ: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಪ್ರವೇಶಿಸಲು ಯತ್ನಿಸಿ ಸುದ್ದಿ ಮಾಡಿದ್ದ ಕೇರಳದ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾಗೆ ಕೇರಳ ಹೈ ಕೋರ್ಟ್ ಶುಕ್ರವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ನ್ಯಾ. ಸುನಿನ್ ಥಾಮಸ್ ನೇತೃತ್ವದ ನ್ಯಾಯಪೀಠ ರೆಹನಾ ಫಾತಿಮಾಗೆ 50 ಸಾವಿರ ಬಾಂಡ್ ನೊಂದಿಗೆ ಇಬ್ಬರು ವ್ಯಕ್ತಿಗಳಿಂದ ಸಹಿ ಮಾಡಿಸಿಕೊಂಡು ಷರತ್ತು ಬದ್ಧಜಾಮೀನು ನೀಡಿದೆ.
ಅಲ್ಲದೇ ಪಂಬಾ ಪೊಲೀಸ್ ಠಾಣಾ ವ್ಯಪ್ತಿಗೆ ತೆರಳದಂತೆ ಸೂಚನೆ ನೀಡಿದ್ದು, ಯಾವುದೇ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತಾರದಂತೆ ನಿರ್ದೇಶನ ನೀಡಲಾಗಿದೆ.
ನವೆಂಬರ್ 27 ರಂದು ಪೊಲೀಸರು ರೆಹನಾ ಫಾತಿಮಾಳನ್ನು ಬಂಧಿಸಿದ್ದರು. ತನ್ನ ಫೇಸ್ ಬುಕ್ ಪುಟಗಳ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಫಾತಿಮಾ ಬಂಧಿಸಲಾಗಿತ್ತು. 32 ವರ್ಷದ ಬಿಎಸ್‌ಎನ್‌ಎಲ್ ಉದ್ಯೋಗಿಯಾಗಿದ್ದ ಫಾತಿಮಾಳನ್ನು ಈ ಹಿನ್ನೆಲೆಯಲ್ಲಿ ಬಿಎಸ್‌ಎನ್‌ಎಲ್ ಸಂಸ್ಥೆ ಹುದ್ದೆಯಿಂದಲೂ ಅಮಾನತು ಮಾಡಿತ್ತು.
ಫೇಸ್‌ಬುಕ್‌ನಲ್ಲಿ ಫಾತಿಮಾ ಅಯ್ಯಪ್ಪನ ಭಕ್ತೆಯೆಂದು ಹೇಳಿಕೊಂಡು ಅಶ್ಲೀಲ ಭಂಗಿಗಳಲ್ಲಿ ಭಾವಚಿತ್ರಗಳನ್ನು ಹಾಕಿಕೊಂಡಿದ್ದಳು ಹಾಗೂ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿ ನಡೆದು ಕೊಂಡಿದ್ದಳು ಎಂದು ರಾಧಾಕೃಷ್ಣ ಮೆನನ್ ಎಂಬುವವರು ದೂರು ಸಲ್ಲಿಸಿದ್ದರು.
ಈ ದೂರನ್ನು ಆಧರಿಸಿ ಭಾರತೀಯ ದಂಡ ಸಂಹಿತೆ 295 ಎ ಪ್ರಕಾರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣವನ್ನು ಆಕೆಯ ಮೇಲೆ ದಾಖಲಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.