
ಬೆಂಗಳೂರು : ಇದೀಗ ಜೆಡಿಎಸ್ ಮುಖಂಡರ ಲೆಕ್ಕಾಚಾರ ಸಂಪೂರ್ಣ ಉಲ್ಟಾ ಆಗಿದೆ. ಚುನಾವಣೆ ಘೋಷಣೆ ಬಳಿಕ ಅಚ್ಚರಿಯ ಬೆಳವಣಿಗೆಗೆ ಕಾದಿದ್ದ ಜೆಡಿಎಸ್’ಗೆ ನಿರಾಸೆಯಾಗಿದೆ.
ಅನೇಕ ಘಟಾನುಘಟಿ ನಾಯಕರು ಜೆಡಿಎಸ್ ಸೇರುತ್ತಾರೆ ಎಂದು ಕಾದಿತ್ತು. ಆದರೆ ಇದೀಗ ಪಕ್ಷಕ್ಕೆ ಬರುವವರಿಗಿಂತ ಹೋಗುವವರ ಸಂಖ್ಯೆಯೇ ಕೂಡ ಹೆಚ್ಚಾಗಿದೆ.
ಸತೀಶ್ ಜಾರಕಿಹೊಳಿ, ಸಿಎಂ ಇಬ್ರಾಹಿಂ, ಅಂಬರೀಶ್, ಜಿಎ ಬಾವಾ ಸೇರಿದಂತೆ ಹಲವು ಮುಖಂಡರು ಜೆಡಿಎಸ್’ಗೆ ಬರುವ ನಿರೀಕ್ಷೆ ಇತ್ತು. ಈ ಬಗ್ಗೆ ಪ್ರಮುಖರೊಂದಿಗೆ ಚರ್ಚೆಯೂ ಕೂಡ ನಡೆದಿತ್ತು. ಆದರೆ ಕೊನೆ ಕ್ಷಣದಲ್ಲಿ ನಿರ್ಣಯ ಬದಲಾಯಿಸಿ ಬಿಜೆಪಿ ಹಾಗೂ ಕಾಂಗ್ರೆಸ್ ಬಿಟ್ಟು ಬರಲು ಹಿಂದೇಟು ಹಾಕಿದ್ದಾರೆ.
ಇನ್ನು ಕಾಂಗ್ರೆಸ್ ಬಿಟ್ಟು ಬಂದಿದ್ದ ನಡಹಳ್ಳಿ, ಮಾಜಿ ಸಚಿವ ಆಲ್ಕೋಡ್ ಹಲುಮಂತಪ್ಪ ಪಕ್ಷದ ವಿಮುಖ ರಾಜಕೀಯದಿಂದ ಕಂಗಾಲಾಗಿದ್ದಾರೆ. ಪಕ್ಷದ ನಾಯಕರು ಪಕ್ಷದಲ್ಲಿ ಇರುವವರನ್ನೇ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇನ್ನು ಕೆಲ ಪ್ರಮುಖರು ಜೆಡಿಎಸ್’ಗೆ ಗುಡ್ ಬೈ ಹೇಳುವ ಚಿಂತನೆಯಲ್ಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.