
ಶಿವಮೊಗ್ಗ ( ಸೆ.27): ನಾಗರಹಾವು ಕಚ್ಚಿ ಆಸ್ಪತ್ರೆಗೆ ದಾಖಲಾಗಿದ್ದ ಶಿವಮೊಗ್ಗದ ಉರಗ ತಜ್ಞ ಸ್ನೇಕ್ ಕಿರಣ್ ಗುಣಮುಖರಾಗಿದ್ದಾರೆ. ಸಾವಿನ ದವಡೆಯಿಂದ ಮೂರನೇ ಬಾರಿಯೂ ಪಾರಾಗಿದ್ದಾರೆ.
ಕಳೆದ ಹಲವು ದಿನಗಳ ಹಿಂದೆ ಹಾವು ಹಿಡಿಯಲು ಹೋಗಿ ನಾಗರಹಾವಿನಿಂದು ಕಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಉರಗ ತಜ್ಞ ಸ್ನೇಕ್ ಕಿರಣ್ ಗುಣಮುಖರಾಗಿದ್ದಾರೆ. ಶಿವಮೊಗ್ಗ ನಗರದ ಕೋಟೆ ರಸ್ತೆಯಲ್ಲಿ ನಾಗರಾಜ್ ಅನ್ನೋರ ಮನೆಯಲ್ಲಿ ಕಿರಣ್ ಗೆ ನಾಗರಹಾವು ಕಚ್ಚಿತ್ತು. ತಕ್ಷಣವೇ ನಂಜಪ್ಪ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸಾ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಇದುವರೆಗೆ ಸ್ನೇಕ್ ಕಿರಣ್ 10 ಸಾವಿರಕ್ಕೂ ಹೆಚ್ಚು ಹಾವುಗಳನ್ನ ಹಿಡಿದಿದ್ದರು. ಅದ್ರಲ್ಲೂ ಘಟ್ಟ ಪ್ರದೇಶದಲ್ಲಿ ಕಂಡು ಬರೋ ಕಾಳಿಂಗ ಸರ್ಪಗಳನ್ನ ಪಳಗಿಸೋದ್ರಲ್ಲೂ ಇವ್ರು ಎತ್ತಿದ ಕೈ. ಆದ್ರೆ, ಈ ಹಿಂದೆ 2 ಬಾರಿ ಹಾವು ಕಚ್ಚಿದ್ದು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಬಾರಿಯೂ ಸಾವನ್ನ ಗೆದ್ದು ಬಂದಿದ್ದಾರೆ.
ಒಟ್ನಲ್ಲಿ ಹಾವು ಹಿಡಿಯಲು ಹೋಗಿ ಮೂರನೇ ಬಾರಿ ಹಾವು ಕಚ್ಚಿದರೂ ಬಚಾವ್ ಆಗಿರುವ ಸ್ನೇಕ್ ಕಿರಣ್ ಸಾವನ್ನೇ ಗೆದ್ದು ಬಂದಿದ್ದು ಸಂತಸದ ಸಂಗತಿ. ಇದು ಶಿವಮೊಗ್ಗ ಜನರಲ್ಲಿ ಸಂತಸ ತರಿಸಿದ್ದು ಎಚ್ಚರಿಕೆ ವಹಿಸಲಿ ಅನ್ನೋ ಮಾತುಗಳೂ ಕೇಳಿ ಬರ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.