ರಾಹುಲ್‌ ಸೋಲಿಸಲು 2014ರಲ್ಲೇ ಸ್ಮೃತಿ ಸಿದ್ಧತೆ!

By Web Desk  |  First Published May 25, 2019, 9:20 AM IST

ಅಮೇಠಿಯಲ್ಲಿ ಗೆದ್ದ ಸ್ಮೃತಿ ಇರಾನಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸೋಲು| ರಾಹುಲ್‌ ಸೋಲಿಸಲು 2014ರಲ್ಲೇ ಸಿದ್ಧತೆ ಆರಂಭಿಸಿದ್ದ ಸ್ಮೃತಿ ಇರಾನಿ


ಅಮೇಠಿ[]ಮೇ.25]: ಉತ್ತರ ಪ್ರದೇಶದ ಅಮೇಠಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಗೆಲುವು ಸಾಧಿಸಿದ್ದು ಈ ಬಾರಿಯ ಲೋಕಸಭೆ ಚುನಾವಣೆಯ ಅಚ್ಚರಿಯ ಫಲಿತಾಂಶಗಳಲ್ಲಿ ಒಂದು. ಮಾಧ್ಯಮಗಳಿಗೆ ನೀಡಿದ ಸಂದರ್ಶನ ವೇಳೆ ಸ್ಮೃತಿ ಇರಾನಿ, ತಮ್ಮ ಗೆಲುವಿನ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

- ಕಳೆದ ಬಾರಿ ಸೋಲಿನ ಬೆನ್ನಲ್ಲೇ, 2019ರ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭ

Tap to resize

Latest Videos

- ಕಾರ್ಯಕರ್ತರ ಪಡೆ ಸಿದ್ಧಪಟಿಸಿ ಸಂಘಟನಾತ್ಮಕವಾಗಿ ಚು. ತಂತ್ರ ರೂಪಿಸಲಾಗಿತ್ತು.

- ಅಮೇಠಿಯಲ್ಲೇ ಉಳಿದು ಸ್ಥಳೀಯರೊಂದಿಗೆ ಸಂವಾದದ ಮೂಲಕ ಜನರಿಗೆ ಹತ್ತಿರದ ಯತ್ನ

- ಗಾಂಧಿ ಅಮೇಠಿಯಲ್ಲಿ ಗೈರಾಗಿರುವುದನ್ನೇ ತಮ್ಮ ಚುನಾವಣಾ ಅಸ್ತ್ರವಾಗಿ ಬಳಕೆ

- ವಯನಾಡಿಂದ ಸ್ಪರ್ಧಿಸಿದಾಗ ರಾಹುಲ್‌ ಹೋರಾಟದಿಂದ ಓಡಿ ಹೋಗುತ್ತಿದ್ದಾರೆ ಎಂದು ಪ್ರಚಾರ

ಅಮೇಠಿ ಜನತೆ ಧನ್ಯವಾದ

ಉತ್ತರ ಪ್ರದೇಶದ ಅಮೇಠಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ತಮ್ಮನ್ನು ಗೆಲ್ಲಿಸಿದ ಜನತೆಗೆ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಧನ್ಯವಾದ ಅರ್ಪಿಸಿದ್ದಾರೆ.ಅಮೇಠಿ ಜನತೆಗೆ ಧನ್ಯವಾದಗಳು. ನೀವು ಅಭಿವೃದ್ಧಿಯಲ್ಲಿ ನಂಬಿಕೆ ಇಟ್ಟಿದ್ದೀರಿ ಮತ್ತು ಕಮಲ ಅರಳಲು ಸಹಾಯ ಮಾಡಿದ್ದೀರಿ’ ಎಂದು ಟ್ವೀಟ್‌ ಮಾಡಿದ್ದಾರೆ.

click me!