ಸ್ಮಾರ್ಟ್ ಫೋನ್ ಬಳಸುವ ಮುನ್ನ ಎಚ್ಚರ..! ನಿಮ್ಮ ಆತ್ಮವಿಶ್ವಾಸ-ಸಂತೋಷವನ್ನೂ ಕಸಿದುಕೊಳ್ಳುತ್ತಿದೆ..!

By Suvarna Web DeskFirst Published Jan 24, 2018, 4:48 PM IST
Highlights

ಯುಎಸ್ ಮಾರುಕಟ್ಟೆಗೆ ಮೊದಲು ಲಗ್ಗೆಯಿಟ್ಟ ಸ್ಮಾರ್ಟ್'ಫೋನ್ 2007ರ ವೇಳೆಗೆ ಸಾಮಾನ್ಯ ಜನರ ಕೈ ಸೇರಿತು. 2007ರಲ್ಲಿ  ಯುಎಸ್ ಮಾರುಕಟ್ಟೆಗೆ ಲಗ್ಗೆಯಿಟ್ಟ ಸ್ಮಾರ್ಟ್'ಫೋನ್ 2012ರ ವೇಳೆಗಾಗಲೇ ಯುಎಸ್'ನ ಸುಮಾರು 50% ಯುವಕರು ಸ್ಮಾರ್ಟ್'ಫೋನ್ ದಾಸರಾಗಿಬಿಟ್ಟಿದ್ದರು. ಇನ್ನು 2016ರ ವೇಳೆಗಾಗಲೇ 1/3 ಮಂದಿ ಯುವಕರ ಜೇಬಿನಲ್ಲಿ ಐ ಫೋನ್ ಇದೆ.

ಸ್ಮಾರ್ಟ್ ಫೋನ್ ಬಳಸುವ ಯುವಕರಿಗೆ ಪಾಲಿಗಿದು ಎಚ್ಚರಿಕೆಯ ಕರೆಘಂಟೆ. 2012ರಿಂದೀಚೆಗೆ ಸ್ಮಾರ್ಟ್ ಫೋನ್ ಬಳಸುವ ಯುವಕರಲ್ಲಿ ಆತ್ಮವಿಶ್ವಾಸ ಹಾಗೂ ಸಂತೋಷವನ್ನು ಕಿತ್ತುಕೊಳ್ಳುತ್ತಿದೆ ಎಂದು ಸ್ಯಾನ್ ಡಿಯಾಗೋ ವಿವಿ ಹಾಗೂ ಜಾರ್ಜಿಯಾ ವಿವಿಯ ಮನೋವಿಜ್ಞಾನಿಗಳ ತಂಡ ನಡೆಸಿದ ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ.

ಅಮೆರಿಕಾದ ಯುವ ಜನತೆಯನ್ನು ಸಂಶೋಧನೆಗೊಳಪಡಿಸಿದ ತಂಡ, ಈ ಮಾಹಿತಿಯನ್ನು ಹೊರಹಾಕಿದೆ. ಯುಎಸ್ ಮಾರುಕಟ್ಟೆಗೆ ಮೊದಲು ಲಗ್ಗೆಯಿಟ್ಟ ಸ್ಮಾರ್ಟ್'ಫೋನ್ 2007ರ ವೇಳೆಗೆ ಸಾಮಾನ್ಯ ಜನರ ಕೈ ಸೇರಿತು. 2007ರಲ್ಲಿ  ಯುಎಸ್ ಮಾರುಕಟ್ಟೆಗೆ ಲಗ್ಗೆಯಿಟ್ಟ ಸ್ಮಾರ್ಟ್'ಫೋನ್ 2012ರ ವೇಳೆಗಾಗಲೇ ಯುಎಸ್'ನ ಸುಮಾರು 50% ಯುವಕರು ಸ್ಮಾರ್ಟ್'ಫೋನ್ ದಾಸರಾಗಿಬಿಟ್ಟಿದ್ದರು. ಇನ್ನು 2016ರ ವೇಳೆಗಾಗಲೇ 1/3 ಮಂದಿ ಯುವಕರ ಜೇಬಿನಲ್ಲಿ ಐ ಫೋನ್ ಇದೆ.

ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಲಗ್ಗೆಯಿಟ್ಟು ವರ್ಷಗಳೇ ಕಳೆದರೂ ಅದರ ಮೇಲಿನ ಕ್ರೇಜ್ ಮಾತ್ರ ಯುವಕರಿಗೆ ಕಡಿಮೆಯಾಗಿಲ್ಲ. ಯುವಕರು ಹೆಚ್ಚಿನ ಸಮಯವನ್ನು ಆನ್'ಲೈನ್'ನಲ್ಲೇ ಕಳೆಯುತ್ತಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ. ಅಲ್ಲದೇ ಹೆಚ್ಚಿನ ಸಮಯವನ್ನು ಸಾಮಾಜಿಕ ಜಾಲತಾಣಗಳಲ್ಲಿ, ಗೇಮ್ಸ್ ಆಡುವುದರಲ್ಲಿ ಕಳೆಯುತ್ತಿರುವುದರಿಂದ ಕುಟುಂಬ, ಸ್ನೇಹಿತರಿಂದ ದೂರ ಉಳಿಯುತ್ತಿದ್ದಾರೆ, ಮಾತ್ರವಲ್ಲದೇ ಸಮಾಜ ಬಾಹಿರ ಕೃತ್ಯಗಳಲ್ಲಿ ತೊಡಗುವ ಸಾಧ್ಯತೆಯೂ ಹೆಚ್ಚು ಎಂದು ಸಂಶೋಧನೆ ತಿಳಿಸಿದೆ.

click me!