ಜಂತಕಲ್ ಮೈನಿಂಗ್ ಪ್ರಕರಣ: ಮಾಜಿ ಸಿಎಂ ಧರಂಸಿಂಗ್​​​​​​​ಗೆ ಎಸ್ಐಟಿ ನೋಟಿಸ್

By Suvarna Web DeskFirst Published Jul 24, 2017, 3:02 PM IST
Highlights

ಜಂತಕಲ್ ಮೈನಿಂಗ್ ಅಕ್ರಮ ನವೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಸಿಎಂ ಧರಂಸಿಂಗ್​​​​​​​’ಗೆ ಎಸ್ಐಟಿಯು ನೋಟಿಸ್ ಜಾರಿ ಮಾಡಿದೆ. ಜುಲೈ 30ರಂದು ತನಿಖಾಧಿಕಾರಿ ಮುಂದೆ ಹಾಜರಾಗಲು ಧರಂ ಸಿಂಗ್’ಗೆ ಸೂಚನೆ ನೀಡಲಾಗಿದೆ.

ಬೆಂಗಳೂರು: ಜಂತಕಲ್ ಮೈನಿಂಗ್ ಅಕ್ರಮ ನವೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಸಿಎಂ ಧರಂಸಿಂಗ್​​​​​​​’ಗೆ ಎಸ್ಐಟಿಯು ನೋಟಿಸ್ ಜಾರಿ ಮಾಡಿದೆ.

ಜುಲೈ 30ರಂದು ತನಿಖಾಧಿಕಾರಿ ಮುಂದೆ ಹಾಜರಾಗಲು ಧರಂ ಸಿಂಗ್’ಗೆ ಸೂಚನೆ ನೀಡಲಾಗಿದೆ. ಧರಂ ಸಿಂಗ್ ಅವರಿಗೆ ತೀವ್ರ ಅನಾರೋಗ್ಯದ ಹಿನ್ನಲೆಯಲ್ಲಿ ಅವರ ಪುತ್ರ ಎಸ್ಐಟಿ ಅಧಿಕಾರಿ ಮುಂದೆ ಹಾಜರಾಗಿ ಧರಂ ಸಿಂಗ್ ಹಾಜರಾಗಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಧರಂ ಸಿಂಗ್ ಅವರು ನಡೆದಾಡಲು ಸಾಧ್ಯವಾಗದಷ್ಟು ಅನಾರೋಗ್ಯ ಹಿನ್ನೆಲೆಯಲ್ಲಿ ಜುಲೈ 30 ಒಳಗೆ ಪ್ರಕರಣಕ್ಕೆ ಸಂಬಂಧಿಸಿದ ಲಿಖಿತ ಹೇಳಿಕೆ ನೀಡುವುದಾಗಿ ತಿಳಿಸಿದ್ದಾರೆಂದು ಎಸ್ಐಟಿ ಮೂಲಗಳು ಸುವರ್ಣ ನ್ಯೂಸ್’ಗೆ ಮಾಹಿತಿ ನೀಡಿವೆ.

 

click me!