ರೆಡ್ಡಿಗೆ ಮತ್ತೊಂದು ಕಾನೂನು ಕುಣಿಕೆ, ಖಾರದಿಪುಡಿ ಮಹೇಶ್ ಎಸ್ಕೇಪ್!

By Web DeskFirst Published Dec 27, 2018, 5:51 PM IST
Highlights

ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.  ಆಂಬಿಡೆಂಟ್ ಕಂಪನಿಯ ಪ್ರಕರಣದಲ್ಲಿಯೂ ರೆಡ್ಡಿ ಅವರ ಹೆಸರು ಕೇಳಿ ಬಂದಿತ್ತು. ಅದೆಲ್ಲ ಮುಗಿದಿದೆ ಎನ್ನುವಾಗ ರೆಡ್ಡಿ ಮತ್ತೊಂದು ಪ್ರಕರಣ ಎದುರಿಸಬೇಕಾಗಿದೆ.

ಬೆಂಗಳೂರು[ಡಿ.27] ಗಾಲಿ ಜನಾರ್ದನ ರೆಡ್ಡಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಜನಾರ್ದನ ರೆಡ್ಡಿ ವಿರುದ್ಧ ಮತ್ತೊಂದು ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ಹೊಸಪೇಟೆಯ ಶ್ರೀ ಮಿನರಲ್ ಕಂಪನಿಯಿಂದ ಅಕ್ರಮ ಗಣಿಗಾರಿಕೆ ಆರೋಪ ಕೇಳಿಬಂದಿತ್ತು. ಇದೇ ಆಧಾರದಲ್ಲಿ ಲೋಕಾಯುಕ್ತ ವರದಿ ಸಲ್ಲಿಸಿತ್ತು.  ಜನಾರ್ದನ ರೆಡ್ಡಿ, ಶ್ರೀನಿವಾಸ ರೆಡ್ಡಿ ಹಾಗು ಅಲಿಯಾಸ್ ವಿರುದ್ದ ಚಾರ್ಜ್ ಶೀಟ್ ಇದೀಗ ಸಲ್ಲಿಕೆಯಾಗಿದೆ.

ರೆಡ್ಡಿ VS ಕುಮಾರಸ್ವಾಮಿ,  ಯಾರು ಪುಣ್ಯಕೋಟಿ? ಯಾರು ರಾಕ್ಷಸ?

ಶಾಸಕರು, ಸಂಸದರ ವಿರುದ್ಧದ ವಿಶೇಷ ನ್ಯಾಯಾಲಯಕ್ಕೆ ಆರೋಪ. 1.69 ಲಕ್ಷ ಟನ್ ಅದಿರು ಅಕ್ರಮ ಸಾಗಾಣಿಕೆ ಆರೋಪ. ಈ  ಶ್ರೀನಿವಾಸ್ ರೆಡ್ಡಿ ಎಂಬುವರು ಜನಾರ್ದನ ರೆಡ್ಡಿ ಆಪ್ತ ಹಾಗು ಓಬಳಾಪುರಂ ಮೈನಿಂಗ್ ಕಂಪನಿ ಪಾಲುದಾರರಾಗಿದ್ದರು.

ಶೇಖ್ ಸಾಬ್ ಗಣಿಯಲ್ಲಿ ಅಕ್ರಮ ನಡೆಸಿದ ಆರೋಪ ಸಹ ಇಲ್ಲಿದೆ.  ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಚಾರ್ಚ್ ಶೀಟ್ ಸಲ್ಲಿಕೆಯಾಗಹಿದ್ದು  A1 ಜನಾರ್ದನ ರೆಡ್ಡಿ, A2  ಅಲಿಖಾನ್ ಮತ್ತು A3 ಯಾಗಿ ಶ್ರೀನಿವಾಸ ರೆಡ್ಡಿ ಮೇಲೆ ಚಾರ್ಜ್‌ ಶೀಟ್ ಸಲ್ಲಿಕೆಯಾಗಿದೆ.  ಸುಮಾರು‌ 1069 ಮೆ.ಟನ್‌ ಅದಿರು ಅಕ್ರಮ ಗಣಿಗಾರಿಗೆ‌ ನಡೆಸಿದ್ದು ಅಕ್ರಮ ಗಣಿಗಾರಿಕೆ ನಡೆಸಿ ರಾಜ್ಯ ಸರ್ಕಾರಕ್ಕೆ 23,89,650 ನಷ್ಟ ಮಾಡಿದ್ದಾರೆ ಎಂದು ವಿಶೇಷ ತನಿಖಾ ದಳದ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ.


 

click me!