
ನವದೆಹಲಿ[ಆ.05]: ಪುಟ್ಟ ಮಗುವೊಂದು ತನ್ನ ತಮ್ಮನನ್ನು ಬಹುದೊಡ್ಡ ಅಪಾಯದಿಂದ ಕಾಪಾಡಿ, ಆತನನ್ನು ರಕ್ಷಿಸಿದ್ದಾಳೆ. ಸದ್ಯ ಆ ಪುಟ್ಟ ಅಕ್ಕನ ಸಾಹಸಭರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಅಗುತ್ತಿದೆ.
ಹೌದು ಅಕ್ಕನೊಂದಿಗೆ ಲಿಫ್ಟ್ ಒಳಗೆ ಬಂದಿದ್ದ ತಮ್ಮನ ಕುತ್ತಿಗೆಯಲ್ಲಿ ಹಗ್ಗವೊಂದಿತ್ತು. ದುರಾದೃಷ್ಟವಶಾತ್ ಈ ಹಗ್ಗದ ಮತ್ತೊಂದು ಬಾಗಿಲು ಮುಚ್ಚಿಕೊಳ್ಳುವುದಕ್ಕೂ ಮೊದಲೇ ಹೊರಬದಿಯಲ್ಲಿ ಸಿಲುಕಿಕೊಂಡಿದೆ. ಹೀಗಾಗಿ ಲಿಫ್ಟ್ ಚಲಿಸಲು ಆರಂಭಿಸಿದ ಮರುಕ್ಷಣವೇ ಬಾಲಕ ಹಗ್ಗದಲ್ಲಿ ನೇತಾಡಲಾರಂಭಿಸಿದ್ದಾನೆ. ತಮ್ಮನ ನರಳಾಟ ಗಮನಿಸಿದ ಅಕ್ಕ ಕೂಡಲೇ ಲಿಫ್ಟ್ ನಲ್ಲಿದ್ದ ಎಮರ್ಜನ್ಸಿ ಬಟನ್ ಒತ್ತಿದ್ದಾಳೆ ಹಾಗೂ ತಮ್ಮನನ್ನು ಎತ್ತಿ ಹಿಡಿದಿದ್ದಾಳೆ. ಹೀಗಾಗಿ ಕುತ್ತಿಗೆಗೆ ಬಿಗಿದುಕೊಂಡಿದ್ದ ಹಗ್ಗ ಸಡಿಲಗೊಂಡಿದೆ. ಕೂಡಲೇ ತಮ್ಮನನ್ನು ಕೆಳಗಿಳಿಸಿ ಆರೈಕೆ ಮಾಡಿದ್ದಾಳೆ.
ಸದ್ಯ ತಮ್ಮನ ಪ್ರಾಣ ಕಾಪಾಡಿದ ಈ ದಿಟ್ಟ ಅಕ್ಕನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಾಲಕಿಯ ಸಮಯಪ್ರಜ್ಞೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.