ಲಂಚ ಕೊಡದೆ ಆಂಬ್ಯುಲೆನ್ಸ್ ನೀಡಲ್ಲ ಎಂದ ಚಾಲಕ: ಅಣ್ಣನನ್ನು ಉಳಿಸಲು ಚಿನ್ನ ಅಡವಿಟ್ಟ ತಂಗಿ, ಕೊನೆಗೂ ಬದುಕಲಿಲ್ಲ ಅಣ್ಣ

By Suvarna Web DeskFirst Published Jul 9, 2017, 9:32 AM IST
Highlights

ರಾಜ್ಯದಲ್ಲಿ ಇಂತಹ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಲೇ ಇವೆ. ಮುಂದುವರೆಯುತ್ತಲೇ ಇವೆ. ಈಗ ಅದಕ್ಕೆ ಮತ್ತೊಂದು ಸೇರ್ಪಡೆ ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಌಂಬುಲೆನ್ಸ್​ ಇದ್ದರೂ ಧನದಾಯಿ ಚಾಲಕ ರೋಗಿ ಸಾಗಿಸಲು ಲಂಚ ಕೇಳಿದ್ದಾನೆ. ಕೊನೆಗೆ ಒಡ ಹುಟ್ಟಿದ ತಂಗಿ ಚಿನ್ನ ಅಡವಿಟ್ಟು ಹಣ ನೀಡಿದ್ರೂ ರೋಗಿ ಮಾತ್ರ ಉಳಿಯಲಿಲ್ಲ.

ಕೊಪ್ಪಳ(ಜು.09): ರಾಜ್ಯದಲ್ಲಿ ಇಂತಹ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಲೇ ಇವೆ. ಮುಂದುವರೆಯುತ್ತಲೇ ಇವೆ. ಈಗ ಅದಕ್ಕೆ ಮತ್ತೊಂದು ಸೇರ್ಪಡೆ ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಌಂಬುಲೆನ್ಸ್​ ಇದ್ದರೂ ಧನದಾಯಿ ಚಾಲಕ ರೋಗಿ ಸಾಗಿಸಲು ಲಂಚ ಕೇಳಿದ್ದಾನೆ. ಕೊನೆಗೆ ಒಡ ಹುಟ್ಟಿದ ತಂಗಿ ಚಿನ್ನ ಅಡವಿಟ್ಟು ಹಣ ನೀಡಿದ್ರೂ ರೋಗಿ ಮಾತ್ರ ಉಳಿಯಲಿಲ್ಲ.

ಕೊಪ್ಪಳದ ಉಮೇಶ್ ದೊಡ್ಡಮನಿ ಎಂಬಾತ ಬೆನ್ನು ಮೂಳೆ ಮುರಿತದಿಂದ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ರು. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಗೆ ಕರೆದೊಯ್ಯಲು ಸೂಚಿಸಿದ್ರು. ಆಸ್ಪತ್ರೆಯಲ್ಲಿ ಅಂಬುಲೆನ್ಸ್ ಇದ್ರೂ ಅಂಬುಲೆನ್ಸ್ ಚಾಲಕ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲು ಉಮೇಶ್ ಸಂಬಂಧಿಕರಿಗೆ 5 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ನಮ್ಮ ಬಳಿ ಅಷ್ಟೊಂದು ಹಣ ಇಲ್ಲ ಎಂದು ಉಮೇಶ್​ನ ತಂಗಿ ಚಂದ್ರಿಕಾ ಬೇಡಿಕೊಂಡರೂ ಚಾಲಕ ಗವಿಸಿದ್ದಪ್ಪ ಕ್ರೂರಿ ಮನ ಕರಗಿಲ್ಲ. ಹಣ ನೀಡದೆ  ಌಂಬುಲೆನ್ಸ್​ ಬರೋದಿಲ್ಲ ಎಂದಿದ್ದಾನೆ. ದಿಕ್ಕುತೋಚದಂತಾದ ಚಂದ್ರಿಕಾ ಕೊನೆಗೆ ತನ್ನ ಬಂಗಾರದ ಕಿವಿಯೋಲೆಗಳನ್ನು ಅಡವಿಟ್ಟು ಚಾಲಕ ಗವಿಸಿದ್ದಪ್ಪನಿಗೆ 1500 ರೂಪಾಯಿ ಹಣ ನೀಡಿದ್ದಾಳೆ.

ಸರ್ಕಾರದ ನಿಯಮದ ಪ್ರಕಾರ ಬಡವರು ಅಂಬುಲೆನ್ಸ್ ಸೌಲಭ್ಯವನ್ನು ಉಚಿತವಾಗಿ ಪಡೆಯಬಹುದು. ಆದ್ರೆ ಬಡವರ ರಕ್ತ ಹೀರುವ ಇಂಥ ಗವಿಸಿದ್ಧಪ್ಪನಂತವರು ನಿಯಮಗಳನ್ನು ಗಾಳಿ ತೂರಿದ್ದಾರೆ.  ಇನ್ನು ಚಿಕಿತ್ಸೆ ಫಲಿಸದೆ  ಉಮೇಶ್  ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ಌಂಬುಲೆನ್ಸ್​ ಚಾಲಕನ ಲಂಚಾವತಾರದ ಬಗ್ಗೆ ಕೇಳಿದ್ರೆ ನಮಗೇನು ಗೊತ್ತೇ ಇಲ್ಲ ಅಂತಾರೆ ಹಿರಿಯ ವೈದ್ಯರು

ಪದೇ ಪದೇ ಇಂಥ ಪ್ರಕರಣಗಳು ಮರುಕಳಿಸುತ್ತಲೇ ಇವೆ ಆದರೆ ವ್ಯವಸ್ಥೆ ಮಾತ್ರ ಎಚ್ಚುಕೊಳ್ಳುತ್ತಿಲ್ಲ. ಇಲ್ಲಿ ರೋಗಿಯ ಜೊತೆ ಮನುಷ್ಯತ್ವವೂ ಸತ್ತಿದೆ. 

 

click me!