ಅನಂತ ಪದ್ಮನಾಭ ದೇವಾಲಯ ಪ್ರವೇಶಕ್ಕೆ ಯೇಸುದಾಸ್'ಗೆ ಅನುಮತಿ

By Suvarna Web Desk  |  First Published Sep 19, 2017, 3:17 PM IST

ಯೇಸುದಾಸ್ ಅವರು ಹಿಂದುತ್ವದ ಮೇಲೆ ಅಪಾರ ನಂಬಿಕೆ ಹೊಂದಿದ್ದಾರೆ. ಹೀಗಾಗಿ ಅವರಿಗೆ ತಿರುವನಂತಪುರ ಅನಂತ ಪದ್ಮನಾಭ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.


ಬೆಂಗಳೂರು (ಸೆ.19): ಯೇಸುದಾಸ್ ಅವರು ಹಿಂದುತ್ವದ ಮೇಲೆ ಅಪಾರ ನಂಬಿಕೆ ಹೊಂದಿದ್ದಾರೆ. ಹೀಗಾಗಿ ಅವರಿಗೆ ತಿರುವನಂತಪುರ ಅನಂತ ಪದ್ಮನಾಭ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.

ಕೇರಳದಲ್ಲಿ ಹಿಂದೂ ದೇವಾಲಯಗಳಲ್ಲಿ ಹಿಂದೂ ಧರ್ಮದಲ್ಲಿ ನಂಬಿಕೆ ಇರುವವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಕ್ಯಾಥೊಲಿಕ್‌ ಕ್ರಿಶ್ಚಿಯನ್‌ ಆಗಿರುವ ಯೇಸುದಾಸ್‌ ನಾನು ಹಿಂದೂ ಧರ್ಮದ ಮೇಲೆ ನಂಬಿಕೆ ಹೊಂದಿದ್ದೇನೆ. ಹೀಗಾಗಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದರು. ವಿಜಯ ದಶಮಿ ದಿನ ಯೇಸುದಾಸ್​ ಭೇಟಿ ನೀಡುವ ಸಾಧ್ಯತೆ ಇದೆ.  ಯೇಸುದಾಸ್‌  ಶಬರಿಮಲೆ ಅಯ್ಯಪ್ಪ ಮತ್ತು ಕೊಲ್ಲೂರು ಮೂಕಾಂಬಿಕೆ ಪರಮಭಕ್ತರು. ಅಯ್ಯಪ್ಪ ಭಕ್ತರ ಅತ್ಯಂತ ಪ್ರೀತಿಯ ಹಾಡಾದ ಸೇರಿದಂತೆ ನೂರಾರು ಭಕ್ತಿಗೀತೆ ಹಾಡಿದ್ದಾರೆ. ಪ್ರತಿ ವರ್ಷ ಜನವರಿ 10ರಂದು ಕೊಲ್ಲೂರಿನಲ್ಲಿ ದೇವಿಯ ಮುಂದೆ ಸಂಗೀತ ಸೇವೆ ಸಲ್ಲಿಸುವ ಮೂಲಕ ಹುಟ್ಟುಹಬ್ಬ ಆಚರಿಸುತ್ತಾರೆ.  ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾರ್ಸಿ ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದಾರೆ ಎಂಬ ಕಾರಣಕ್ಕೆ ಗುರುವಾಯೂರು ದೇವಳಕ್ಕೆ ಪ್ರವೇಶ ನಿರಾಕರಿಸಿದ್ದು ಭಾರಿ ಸುದ್ದಿಯಾಗಿತ್ತು.

Latest Videos

click me!