
ಬೆಂಗಳೂರು(ಮಾ. 04): ತಮಿಳು ನಟ ಧನುಷ್ ವಿರುದ್ಧ ಇತ್ತೀಚೆನ ದಿನಗಳಿಂದ ಜಟಾಪಟಿಯಲ್ಲಿರುವ ಖ್ಯಾತ ಗಾಯಕಿ ಸುಚಿತ್ರಾ ಕಾರ್ತೀಕ್ ಅವರ ಟ್ವಿಟ್ಟರ್ ಅಕೌಂಟ್'ನಿಂದ ದನುಷ್ ಸೇರಿದಂತೆ ಅನೇಕ ನಟ-ನಟಿಯರ ಅಶ್ಲೀಲ ಫೋಟೋ-ವಿಡಿಯೋಗಳು ಪ್ರಕಟವಾಗಿ ದಕ್ಷಿಣ ಭಾರತದ ಚಿತ್ರರಂಗಕ್ಕೆ ಶಾಕ್ ಕೊಟ್ಟಿವೆ. ಮುಂಗಾರು ಮಳೆ ಸೇರಿದಂತೆ ನಾಲ್ಕೈದು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಸಂಚಿತಾ ಶೆಟ್ಟಿಯವರದ್ದೆನ್ನಲಾದ ಫೋಟೋ ಕೂಡ ಸುಚಿತ್ರಾ ಟ್ವಿಟ್ಟರ್'ನಲ್ಲಿ ಕಾಣಿಸಿಕೊಂಡಿದೆ. ಆದರೆ, ಸಂಚಿತಾ ಶೆಟ್ಟಿ ಈ ಕುರಿತು ಪ್ರತಿಕ್ರಿಯಿಸಿದ್ದು, ಆ ಫೋಟೋದಲ್ಲಿರುವುದು ತಾನಲ್ಲ, ತನಗೂ ಅದಕ್ಕೂ ಯಾವ ಸಂಬಂಧವೂ ಇಲ್ಲ ಎಂದು ಹೇಳಿ ವಿಡಿಯೋ ರೆಕಾರ್ಡ್ ಮಾಡಿ ಟ್ವೀಟ್ ಮಾಡಿದ್ದಾರೆ.
ಧನುಷ್-ತ್ರಿಷಾ ನಿಕಟ:
ಸುಚಿತ್ರಾ ಕಾರ್ತಿಕ್ ಟ್ವಿಟ್ಟರ್'ನಲ್ಲಿ ಪ್ರಕಟಗೊಂಡ ಫೋಟೋಗಳಲ್ಲಿ ಪ್ರಮುಖವಾಗಿರುವುದು ಧನುಷ್ ಮತ್ತು ತ್ರಿಶಾ ಅವರು ನಿಕಟವಾಗಿರುವ ಚಿತ್ರವೂ ಒಂದು. ಅನಿರುದ್ಧ್ ರವಿಚಂದರ್ ಹಾಗೂ ಆಂಡ್ರೀ ಜೆರೆಮಯ್ಯಾ ಜೋಡಿ ಸರಸ ಸಲ್ಲಾಪದಲ್ಲಿರುವುದು; ತಮಿಳಿನ ವಿಜಯ್ ಟಿವಿ ಆಂಕರ್ ದಿವ್ಯದರ್ಶಿನಿ, ಹನ್ಸಿಕಾ ಮೋಟ್ವಾನಿ, ಮಾನಸಿ ಪರೇಖ್, ರಾಣಾ ದಗ್ಗುಬಾಟ್ಟಿ, ಅಮಲಾ ಪೌಲ್, ಚಿನ್ಮಯೀ ಮೊದಲಾದವರ ಅಶ್ಲೀಲ ಫೋಟೋಗಳು ಟ್ವೀಟ್ ಆಗಿವೆ.
ಧನುಶ್ ಜೊತೆ ಸೆಕ್ಸ್:
ಈಗ್ಗೆ ಕೆಲ ದಿನಗಳಿಂದ ಗಾಯಕಿ ಸುಚಿತ್ರಾ ಕಾರ್ತಿಕ್ ಮತ್ತು ಸ್ಟಾರ್ ನಟ ಧನುಷ್ ನಡುವೆ ಜಟಾಪಟಿ ನಡೆಯುತ್ತಿದೆ. ಧನುಷ್ ಮತ್ತು ಅನಿರುದ್ಧ್ ಅವರಿಬ್ಬರೂ ತನ್ನೊಂದಿಗೆ ಸೆಕ್ಸ್ ಮಾಡಿದ್ದರೆಂದು ಸುಚಿತ್ರಾ ಅವರು ಹೇಳಿಕೊಂಡಿದ್ದಾರೆ. ಕೆಲ ವಾರಗಳ ಹಿಂದೆ ಯಾವುದೋ ಪಾರ್ಟಿಯೊಂದರಲ್ಲಿ ತನ್ನ ಡ್ರಿಂಕ್ಸ್'ಗೆ ಅಮಲುವಸ್ತು ಬೆರೆಸಿ ತನಗೆ ಕುಡಿಸಲಾಗಿತ್ತು. ಅನಿರುದ್ಧ್ ಮತ್ತು ಧನುಷ್ ಇಬ್ಬರೂ ಆಗ ತನ್ನೊಂದಿಗೆ ಸಂಭೋಗ ಮಾಡಿದರು ಎಂದು ಸುಚಿತ್ರಾ ಟ್ವಿಟ್ಟರ್'ನಲ್ಲಿ ಬಾಂಬ್ ಸಿಡಿಸಿದ್ದಳು. ಕೆಲ ದಿನಗಳ ಬಳಿಕ, ಧನುಷ್'ನ ಕಡೆಯವರು ತನ್ನ ಮೇಲೆ ಹಲ್ಲೆ ನಡೆಸಿದರೆಂದು ಹೇಳಿ, ಗಾಯಗೊಂಡಿರುವ ತನ್ನ ಕೈನ ಫೋಟೋವನ್ನು ಟ್ವಿಟ್ಟರ್'ನಲ್ಲಿ ಹಾಕಿದ್ದಳು.
ಮಾನಸಿಕ ಅಸ್ವಸ್ಥೆಯೇ?
ಸುಚಿತ್ರಾ ಕಾರ್ತಿಕ್ ಅವರು ಟ್ವಿಟ್ಟರ್'ನಲ್ಲಿ ಗಳಿಗೆಗೊಂದು ಮಾತನ್ನು ಬದಲಿಸುತ್ತಿದ್ದಾರೆ. ತನ್ನ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿದೆ. ಅಶ್ಲೀಲ ಫೋಟೋ, ವಿಡಿಯೋ ಲೀಕ್ ಮಾಡಿದ್ದು ತಾನಲ್ಲ ಎಂದು ಹೇಳುತ್ತಾರೆ. ಆದರೆ, ಕೆಲ ಹೊತ್ತಿನಲ್ಲೇ ಫೋಟೋದಲ್ಲಿರುವ ವ್ಯಕ್ತಿಯೊಬ್ಬನೇ ಈ ಕೃತ್ಯ ಎಸಗಿದ್ದಾನೆ ಎಂದು ಓದುಗರಿಗೆ ಹುಳ ಬಿಡುತ್ತಾಳೆ ಈ ಗಾಯಕಿ. ಮಾಧ್ಯಮಗಳಲ್ಲಿ ಈ ಕುರಿತು ಪ್ರಕಟವಾದ ವರದಿಗಳನ್ನು ಶೇರ್ ಮಾಡಿ ಟ್ವೀಟ್ ಮಾಡುತ್ತಾರೆ.
ಗಮನಾರ್ಹ ವಿಚಾರವೆಂದರೆ, ಇನ್ನಷ್ಟು ನಟ-ನಟಿಯರ ಅಶ್ಲೀಲ ದೃಶ್ಯಗಳನ್ನು ಲೀಕ್ ಮಾಡುವುದಾಗಿಯೂ ಸುಚಿತ್ರಾ ಅವರ ಟ್ವಿಟ್ಟರ್'ನಲ್ಲಿ ಎಚ್ಚರಿಸಲಾಗಿದೆ. ಒಟ್ಟಿನಲ್ಲಿ, ಇವರ ಟ್ವಿಟ್ಟರ್ ಬಾಂಬ್ ದಕ್ಷಿಣ ಭಾರತ ಚಿತ್ರರಂಗವನ್ನು ಬೆಚ್ಚಿಬೀಳಿಸಿದೆ.
ಪತಿ ಸ್ಪಷ್ಟನೆ: ಇದೇ ವೇಳೆ, ಸುಚಿತ್ರಾ ಅವರ ಪತಿ ಕಾರ್ತಿಕ್ ಕುಮಾರ್ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ್ದು, ತಮ್ಮ ಪತ್ನಿಯ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
(ಸೆಕ್ಸ್ ಬಾಂಬ್ ಸಿಡಿಸಿರುವ ಟ್ವಿಟ್ಟರ್ ಐಡಿಯು ಸುಚಿತ್ರಾ ಕಾರ್ತಿಕ್ ಅವರದ್ದೇ ಎನ್ನುವುದಕ್ಕೆ ಸ್ಪಷ್ಟ ಸಾಕ್ಷಿಯಿಲ್ಲ. ಸುಚಿತ್ರಾ ಪತಿ ಕಾರ್ತಿಕ್ ಕುಮಾರ್ ಈ ಬೆಳವಣಿಗೆಯನ್ನು ತಳ್ಳಿಹಾಕಿದ್ದಾರೆ. ಗಾಯಕಿ ಸುಚಿತ್ರಾ ಖುದ್ದಾಗಿ ಎಲ್ಲಿಯೂ ಸ್ಪಷ್ಟನೆ ನೀಡಿಲ್ಲ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.