ಉಳಿತಾಯ ಬಜೆಟ್ ಮಂಡಿಸಿದ ಸಚಿವ; 21 ವರ್ಷ ಮೇಲ್ಪಟ್ಟ ಪ್ರಜೆಗಳಿಗೆ ಬೋನಸ್..!

By Suvarna Web DeskFirst Published Feb 19, 2018, 6:28 PM IST
Highlights

ಹೆಂಗ್ ಸ್ವೀ ಕೇಟ್ ಪಾರ್ಲಿಮೆಂಟ್'ನಲ್ಲಿ ಮಿಗತೆ ಬಜೆಟ್ ಮಂಡಿಸಿದ ಬಳಿಕ, ಉಳಿತಾಯದ ಹಣವನ್ನು 'ಹಾಂಗ್ಬೋ' ಕೊಡುಗೆ ರೂಪದಲ್ಲಿ ಬೋನಸ್ ಘೋಷಿಸಿದರು. 2018ರೊಳಗಾಗಿ ಸಿಂಗಾಪುರದ 2.7 ಮಿಲಿಯನ್ ಜನರು ಬೋನಸ್ ಅನುಕೂಲವನ್ನು ಪಡೆಯಲಿದ್ದಾರೆ.

ಸಿಂಗಾಪುರ(ಫೆ.19): ಸಿಂಗಾಪುರ ರಾಜ್ಯ ಸಚಿವ ಮಂಡಿಸಿದ ಮಿಗತೆ ಬಜೆಟ್'ನಿಂದಾಗಿ 10 ಬಿಲಿಯನ್ ಸಿಂಗಾಪುರ ಡಾಲರ್ ಉಳಿತಾಯವಾಗಿದ್ದು, 21 ವರ್ಷ ಮೇಲ್ಪಟ್ಟ ಸಿಂಗಾಪುರ ಪ್ರಜೆಗಳಿಗೆ 300 ಡಾಲರ್(14,748 ರುಪಾಯಿ) ಬೋನಸ್ ಸಿಗಲಿದೆ.

ಹೆಂಗ್ ಸ್ವೀ ಕೇಟ್ ಪಾರ್ಲಿಮೆಂಟ್'ನಲ್ಲಿ ಮಿಗತೆ ಬಜೆಟ್ ಮಂಡಿಸಿದ ಬಳಿಕ, ಉಳಿತಾಯದ ಹಣವನ್ನು 'ಹಾಂಗ್ಬೋ' ಕೊಡುಗೆ ರೂಪದಲ್ಲಿ ಬೋನಸ್ ಘೋಷಿಸಿದರು. 2018ರೊಳಗಾಗಿ ಸಿಂಗಾಪುರದ 2.7 ಮಿಲಿಯನ್ ಜನರು ಬೋನಸ್ ಅನುಕೂಲವನ್ನು ಪಡೆಯಲಿದ್ದಾರೆ.

ಜನರ ಆದಾಯಕ್ಕನುಗುಣವಾಗಿ 300,200 ಹಾಗೂ 100 ಸಿಂಗಾಪುರ ಡಾಲರ್ ಪ್ರಜೆಗಳ ಕೈಸೇರಲಿದೆ. ಒಟ್ಟಿನಲ್ಲಿ ಮಿಗತೆ ಬಜೆಟ್ ಮಂಡಿಸುವ ಮೂಲಕ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ಜನರ ತೆರಿಗೆ ಹಣವನ್ನ ಜನರಿಗೆ ಹಿಂತಿರುಗಿಸುವ ಕೆಲಸ ಮಾಡಿದ್ದಾರೆ.

click me!