
ಬೆಂಗಳೂರು (ಡಿ.31): ದೇಶದ 4 ಪ್ರಮುಖ ಸಚಿವರಲ್ಲಿ ಒಬ್ಬರಾಗಿರುವ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಯಾವುದೇ ಭದ್ರತೆ ಇಲ್ಲದೆ ಸಾಮಾನ್ಯ ಪ್ರಜೆಯಂತೆ ರಾಜಧಾನಿಯ ರಸ್ತೆಯಲ್ಲಿ ನಡೆದುಕೊಂಡು ಊಟಕ್ಕೆ ಹೋಗುವ ಮೂಲಕ ಶನಿವಾರ ಗಮನ ಸೆಳೆದರು. ನಗರದ ಅಲಿ ಅಸ್ಗರ್ ರಸ್ತೆಯಲ್ಲಿರುವ ತಮ್ಮ ಸಂಸದರ ಕಚೇರಿಯಿಂದ ಶನಿವಾರ ಮಧ್ಯಾಹ್ನ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿನ ಚಂದ್ರಿಕಾ ಹೋಟೆಲ್‌ಗೆ ಅವರು ಯಾವುದೇ ಭದ್ರತೆ ಇಲ್ಲದೆ ತೆರಳಿದರು.
ದಾರಿಹೋಕರೆಲ್ಲ ಅಚ್ಚರಿಯಿಂದಲೇ ನೋಡುತ್ತಿದ್ದರು. ಕೆಲವರಿಗೆ ಯಾರಿವರು ಎಂಬುದೇ ಗೊತ್ತಾಗಲಿಲ್ಲ. ರಕ್ಷಣಾ ಇಲಾಖೆಯ ಸಚಿವರಾದರೂ ಸಹ ಯಾವುದೇ ಭದ್ರತೆ ಇಲ್ಲದೆ ಜನಸಾಮಾನ್ಯರಂತೆ ಕೆಲವೇ ಕೆಲವು ಮಂದಿಯೊಂದಿಗೆ ಹೆಜ್ಜೆ ಹಾಕಿದರು.
ಕೇಂದ್ರ ಸಚಿವರು ನಡೆದು ಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ಪಡೆದ ಸಂಚಾರ ಪೊಲೀಸರು ಯಾವುದೇ ವಾಹನಗಳು ತೆರಳದಂತೆ ನೋಡಿಕೊಂಡು ಸಚಿವರಿಗೆ ನಡೆದುಕೊಂಡು ಹೋಗಲು ಅನುವು ಮಾಡಿಕೊಟ್ಟರು. ನಂತರ ಚಂದ್ರಿಕಾ ಹೋಟೆಲ್‌ಗೆ ತೆರಳಿದ ಅವರು ಸಾವಯವ ಭೋಜನ ಸವಿದರು. ಜನಪ್ರತಿನಿಧಿಗಳು ಪ್ರಭಾವಿ ಹುದ್ದೆ ಅಲಂಕರಿಸಿದರೆ ಭಾರೀ ಭದ್ರತಾ ಹೊಂದಿರುವುದು ಸಾಮಾನ್ಯ.
ಕೆಲವರು ಖಾಸಗಿ ಭದ್ರತೆಯನ್ನೂ ನಿಯೋಜಿಸಿಕೊಳ್ಳುತ್ತಾರೆ. ಆದರೆ, ಸಾಮಾನ್ಯರಂತೆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಮೂಲಕ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತರರಿಗಿಂತ ಭಿನ್ನ ಎಂಬುದನ್ನು ತೋರಿಸಿಕೊಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.