
ದಿಸ್‌ಪುರ್(ಜೂ.23): 'ಏನಾದರೂ ಆಗು ಮೊದಲು ಮಾನವನಾಗು'..ಎಂಬುದು ರಾಷ್ಟ್ರಕವಿ ಕುವೆಂಪು ಅವರು ಇಡೀ ವಿಶ್ವಕ್ಕೆ ಹೇಳಿ ಕೊಟ್ಟ ಪಾಠ. ಜಾತಿ, ಧರ್ಮ, ಬಣ್ಣ ಇವುಗಳನ್ನೆಲ್ಲಾ ಮೀರಿದ ಮನುಷ್ಯತ್ವವೇ ಕೊನೆಯತನಕ ಉಳಿಯೋದು, ಕೊನೆತನಕ ಬದುಕೋದು. ಇದಕ್ಕೆ ಅಸ್ಸೋಂ ಪ್ರವಾಹ ಸ್ಪಷ್ಟ ಉದಹಾರಣೆ ಎನ್ನಬಹುದು.
ಅಸ್ಸೋಂ ಪ್ರವಾಹಕ್ಕೂ ಮಾನವೀಯತೆಗೂ ಏನು ಸಂಬಂಧ ಅಂತೀರಾ?. ಸಂಬಂಧ ಇದೆ. ಅಸ್ಸೋಂ ರಾಜ್ಯದಲ್ಲಿ ತಲೆದೋರಿರುವ ಪ್ರವಾಹ ಸಾಕಷ್ಟು ಜನರನ್ನು ಬಲಿ ಪಡೆದಿದೆ. ಸಾವಿರಾರು ಜನ ಮನೆ ಮಠ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಸರ್ಕಾರ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಹಗಲಿರುಳೂ ದುಡಿಯುತ್ತಿದೆ. ಈ ಮಧ್ಯೆ ಪಂಜಾಬ್‌ನಿಂದ ಬಂದಿರುವ ಸಿಖ್ ಸಮುದಾಯದ ಯುವಕರ ಗುಂಪೊಂದು ಪ್ರವಾಹಪೀಡಿತ ಪ್ರದೇಶಗಳಲ್ಲಿ ಸ್ವಯಂಪ್ರೇರಣೆಯಿಂದ ಜನರಿಗೆ ಸಹಾಯ ಮಾಡುತ್ತಿದೆ.
ಪಂಜಾಬ್‌ನಿಂದ ಬಂದಿರುವ ಖಾಲ್ಸಾ ಎಂಬ ಯುವಕರ ಗುಂಪು ಸ್ವಯಂಪ್ರೇರಿತವಾಗಿ ಅಸ್ಸೋಂ ಪ್ರವಾಹಪೀಡಿತ ಪ್ರದೇಶಗಳಲ್ಲಿ ಜನಸೇವೆ ಮಾಡುತ್ತಿದೆ. ಜನರನ್ನು ರಕ್ಷಿಸಲು ಖುದ್ದಾಗಿ ಖಾಸಗಿ ಬೋಟ್‌ಗಳನ್ನು ತಂದಿರುವ ಈ ಗುಂಪು, ಪ್ರವಾಹದಿಂದ ಜಲಾವೃತವಾಗಿರುವ ಪ್ರದೇಶಗಳಿಗೆ ಬೋಟ್ ಸಮೇತ ಕಾಲಿಡುವ ಖಾಲ್ಸಾ ಯುವಕರ ಪಡೆ, ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಗಳಿಗೆ ತಲುಪಿಸುತ್ತಿದೆ. ಅಷ್ಟೇ ಅಲ್ಲದೇ ಸಂತ್ರಸ್ತರಿಗೆ ಆಹಾರ, ಕುಡಿಯುವ ನೀರು ಮತ್ತು ಅಗತ್ಯ ಔಷಧಗಳನ್ನು ಸರಬರಾಜು ಮಾಡುವ ಮೂಲಕ ಮನುಷ್ಯತ್ವ ಭಾಷೆ, ಗಡಿಗಳನ್ನೂ ಮೀರಿದ್ದು ಎಂಬುದನ್ನು ಸಾರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.