
ಮುಂಬೈ(ಜೂ.23): ಅಪ್ಪನ ತೋಳಿನಲ್ಲಿ ಸಿಗುವ ಸುರಕ್ಷತಾ ಭಾವ ಇನ್ನೆಲ್ಲಿ ಸಿಗಬೇಕು ಹೇಳಿ. ಅಪ್ಪ ಅಂದ್ರೆ ಹಾಗೆನೆ ಬಡವನೋ, ಶ್ರೀಮಂತನೋ ತನ್ನ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಬಲ್ಲ ಶಕ್ತಿ ಕೇವಲ ಆತನಿಗೆ ಮಾತ್ರ ಇರೋದು. ಮಕ್ಕಳ ಭವಿಷ್ಯ, ಮಕ್ಕಳ ಬೇಕು ಬೇಡಗಳು ಸದಾ ಆತನ ಗಮನದಲ್ಲಿರುತ್ತವೆ.
ಮಕ್ಕಳ ಬೇಡಿಕೆ ಪೂರೈಕೆಗೆಂದೇ ಆತ ಹಗಲಿರುಳೂ ಕಷ್ಟಪಟ್ಟು ದುಡಿಯುತ್ತಾನೆ. ತನ್ನೆಲ್ಲಾ ನೋವನ್ನು ಮಕ್ಕಳ ನಗು ಕಂಡು ಮರೆಯುತ್ತಾನೆ. ಈಗ ಹೇಳಲು ಹೊರಟಿರುವ ತಂದೆಯ ಕತೆಯೂ ಇದೇ ತರಹದ್ದು. ಮುಂಬೈ ಎಂಬ ಮಾಯಾನಗರಿಯಲ್ಲಿ ತಳ್ಳು ಬಂಡಿಯಲ್ಲಿ ಟೀ ಮಾರುವ ತಂದೆಯೋರ್ವ ತನ್ನ ಮಕ್ಕಳನ್ನು ಮ್ಯಾಕ್‌ಡೋನಾಲ್ಡ್ ಗೆ ಕರೆದುಕೊಂಡು ಹೋದ ಕತೆ ಇದು.
ತಳ್ಳು ಬಂಡಿಯಲ್ಲಿ ಟೀ ಮಾರುವ ವ್ಯಕ್ತಿಯೋರ್ವ ಒಂದು ದಿನ ನಿತ್ಯದ ದುಡಿಮೆಗಿಂತ ಹೆಚ್ಚಿನ ಸಂಪಾದನೆ ಮಾಡಿದ್ದಾನೆ. ಹೀಗಾಗಿ ತನ್ನ ಹೆಂಡತಿ ಮತ್ತು ಮಕ್ಕಳನ್ನು ಮ್ಯಾಕ್‌ಡೋನಾಲ್ಡ್ ಗೆ ಕರೆದುಕೊಂಡು ಹೋಗಿದ್ದಾನೆ. ತಂದೆ ತಮನ್ನು ಮ್ಯಾಕ್‌ಡೋನಾಲ್ಡ್ ಗೆ ಕರೆದುಕೊಮಡು ಹೋದ ಬಗ್ಗೆ ಮಕ್ಕಳಿಗೆ ಅದೆಷ್ಟು ಹೆಮ್ಮೆ ಎಂದರೆ ಬರ್ಗರ್ ತಿನ್ನುತ್ತಾ ತಂದೆಯಲ್ಲಿ ಓರ್ವ ಹಿರೋನನ್ನು ಕಂಡಿದ್ದಾರೆ.
ಈ ವಿಷಯವನ್ನು 'ಹ್ಯೂಮನ್ಸ್ ಆಫ್ ಬಾಂಬೆ' ಜೊತೆ ಹಂಚಿಕೊಂಡಿರುವ ಆತ, ತನ್ನ ಕುಟುಂಬವನ್ನು ಮ್ಯಾಕ್‌ಡೋನಾಲ್ಡ್ ಗೆ ಕರೆದುಕೊಂಡು ಹೋದ ದಿನ ತಮ್ಮ ಜೀವನದ ಅತ್ಯಂತ ಮಹತ್ವದ ದಿನ ಎಂದು ಹೇಳಿದ್ದಾರೆ. ಹ್ಯೂಮನ್ಸ್ ಆಫ್ ಬಾಂಬೆ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿರುವ ಈ ಪೋಸ್ಟ್‌ಗೆ ಸಾವಿರಾರು ಜನ ಕಮೆಂಟ್ ಮಾಡಿದ್ದು, ತಂದೆಯ ಅಭಿಮಾನವನ್ನು ಕೊಂಡಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.