
ನ್ಯೂಯಾರ್ಕ್(ಏ.18): ಅಮೆರಿಕದಲ್ಲಿ ಮತ್ತೊಮ್ಮೆ ಭಾರತೀಯ ಮೂಲದ ಸಿಖ್ ಚಾಲಕನ ಮೇಲೆ ಜನಾಂಗೀಯ ದಾಳಿ ನಡೆದಿದೆ. 25ರ ಹರೆಯದ ಸಿಖ್ ಕಾರು ಚಾಲಕನಿಗೆ, ಮದ್ಯಪಾನ ಮಾಡಿದ್ದ ಪ್ರಯಾಣಿಕರ ಗುಂಪು ಹಲ್ಲೆ ನಡೆಸಿ, ಅವರ ತಲೆಯ ರುಮಾಲನ್ನು ಕಿತ್ತು ಹಾಕಿದೆ. ಇದೊಂದು ಜನಾಂಗೀಯ ದ್ವೇಷದ ಪ್ರಕರಣವಾಗಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಂಜಾಬ್‌ನಿಂದ ಮೂರು ವರ್ಷಗಳ ಹಿಂದೆ ವಲಸೆ ಹೋಗಿದ್ದ ಹರಿಕಾಂತ್ ಸಿಂಗ್ ಮೇಲೆ ಭಾನುವಾರ ಈ ಹಲ್ಲೆ ನಡೆದಿದೆ. ‘‘ನಾನು ತುಂಬಾ ಭಯಭೀತನಾಗಿದ್ದೇನೆ. ನಾನು ಇಲ್ಲಿ ಕೆಲಸ ಮಾಡುವುದಿಲ್ಲ. ಇದು ನನ್ನ ಧರ್ಮದ ಮೇಲೆ ನಡೆದ ಹಲ್ಲೆ. ಇದು ನನ್ನ ನಂಬಿಕೆಗೆ ಅವಮಾನ ಮತ್ತು ತುಂಬಾ ಭಯಾನಕವಾದುದು’’ ಎಂದು ಹರಿಕಾಂತ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.