ಗೇಲ್ ದಾಖಲೆಯ ಅಬ್ಬರದಲ್ಲಿ ಆರ್'ಸಿಬಿ'ಗೆ ಜಯ: ಮೆಕ್ಕಲಂ ಹೋರಾಟ ವ್ಯರ್ಥ

Published : Apr 18, 2017, 06:19 PM ISTUpdated : Apr 11, 2018, 12:58 PM IST
ಗೇಲ್ ದಾಖಲೆಯ ಅಬ್ಬರದಲ್ಲಿ ಆರ್'ಸಿಬಿ'ಗೆ ಜಯ: ಮೆಕ್ಕಲಂ ಹೋರಾಟ ವ್ಯರ್ಥ

ಸಾರಾಂಶ

ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಆರ್‌ಸಿಬಿ ನೀಡಿದ್ದ 214 ರನ್‌ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಗುಜರಾತ್ ಲಯನ್ಸ್ 21 ರನ್‌ಗಳ ಸೋಲೊಪ್ಪಿಕೊಂಡಿತು. ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 10ನೇ ಆವೃತ್ತಿಯ 20ನೇ ಪಂದ್ಯದಲ್ಲಿ ಗಾಯಾಳು ಎಬಿ ಡಿವಿಲಿಯರ್ಸ್‌ ಬದಲಿಗೆ ಕಣಕ್ಕಿಳಿದ ಗೇಲ್ 3 ರನ್ ಗಳಿಸುತ್ತಿದ್ದಂತೆ ಈ ದಾಖಲೆಗೆ ಪಾತ್ರರಾದರು.

ರಾಜ್ಕೋಟ್(ಏ.18): ಟಿ20 ಕ್ರಿಕೆಟ್‌ನಲ್ಲಿ 10,000 ರನ್ ಸಿಡಿಸಿದ ವಿಶ್ವದ ಮೊದಲ ಕ್ರಿಕೆಟಿಗನೆನ್ನುವ ಅಪರೂಪದ ವಿಶ್ವ ದಾಖಲೆ ಬರೆದದ್ದಲ್ಲದೆ, ಗೆಲುವಿನ ಅನಿವಾರ್ಯತೆಗೆ ಸಿಲುಕಿದ್ದ ರಾಯಲ್ ಚಾಲೆಂಜರ್ಸ್‌ ಬೆಂಗಳೂರಿಗೆ ರನ್ ಜಯ ತಂದುಕೊಟ್ಟರು.

ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಆರ್‌ಸಿಬಿ ನೀಡಿದ್ದ 214 ರನ್‌ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಗುಜರಾತ್ ಲಯನ್ಸ್ 21 ರನ್‌ಗಳ ಸೋಲೊಪ್ಪಿಕೊಂಡಿತು. ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 10ನೇ ಆವೃತ್ತಿಯ 20ನೇ ಪಂದ್ಯದಲ್ಲಿ ಗಾಯಾಳು ಎಬಿ ಡಿವಿಲಿಯರ್ಸ್‌ ಬದಲಿಗೆ ಕಣಕ್ಕಿಳಿದ ಗೇಲ್ 3 ರನ್ ಗಳಿಸುತ್ತಿದ್ದಂತೆ ಈ ದಾಖಲೆಗೆ ಪಾತ್ರರಾದರು.

ಐಪಿಎಲ್‌ನಲ್ಲಿ 28ನೇ ಅರ್ಧಶತಕ ದಾಖಲಿಸಿದ ನಾಯಕ ವಿರಾಟ್ ಕೊಹ್ಲಿ (64: 50 ಎಸೆತ, 7 ಬೌಂಡರಿ, 1 ಸಿಕ್ಸರ್) ಜತೆ ಮೊದಲ ವಿಕೆಟ್‌ಗೆ ಕಲೆಹಾಕಿದ 122 ರನ್ ಜತೆಯಾಟ ಹಾಗೂ ಮೂರನೇ ವಿಕೆಟ್‌ಗೆ ಕೇದಾರ್ ಜಾಧವ್ (38) ಹಾಗೂ ಟ್ರಾವಿಸ್ ಹೆಡ್ (16) ಪೇರಿಸಿದ ಮುರಿಯದ 54 ರನ್‌ಗಳ ನೆರವಿನಿಂದ ಆರ್‌ಸಿಬಿ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ಗೆ 213 ರನ್ ಕಲೆಹಾಕಿ ಗುಜರಾತ್ ಲಯನ್ಸ್‌ಗೆ ಭಾರೀ ಸವಾಲು ನೀಡಿದರು. ಇದಕ್ಕುತ್ತರವಾಗಿ ಲಯನ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಲಷ್ಟೇ ಶಕ್ತವಾಯಿತು. ಬ್ರೆಂಡನ್ ಮೆಕ್ಕಲಂ (72: 44 ಎಸೆತ, 2 ಬೌಂಡರಿ, 7 ಸಿಕ್ಸರ್) ಹಾಗೂ ಇಶಾನ್ ಕಿಶನ್ (39: 16 ಎಸೆತ, 2 ಬೌಂಡರಿ, 4 ಸಿಕ್ಸರ್) ಹೋರಾಟ ತಂಡವನ್ನು ಗೆಲುವಿನ ದಡ ಮುಟ್ಟಿಸಲಿಲ್ಲ. ಆರ್‌ಸಿಬಿ ಪರ ಯುಜ್‌ವೇಂದ್ರ ಚಾಹಲ್ 3 ವಿಕೆಟ್ ಕಬಳಿಸಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಗೇಲ್ ವಿಶೇಷ ದಾಖಲೆ

ಪ್ರಥಮ ದರ್ಜೆ, ಲಿಸ್ಟ್ ‘ಎ’ ಹಾಗೂ ಟಿ20 ಮೂರೂ ಮಾದರಿಯಲ್ಲಿ 10000ಕ್ಕೂ ಅಕ ರನ್ ಗಳಿಸಿರುವ ಏಕೈಕ ಬ್ಯಾಟ್ಸ್‌ಮನ್ ಎನ್ನುವ ಕೀರ್ತಿಗೂ ಗೇಲ್ ಪಾತ್ರರಾದರು. 290 ಟಿ20 ಪಂದ್ಯಗಳಿಂದ ಗೇಲ್ 10074 ರನ್ ಕಲೆಹಾಕಿದ್ದು, 18 ಶತಕ ಹಾಗೂ 61 ಅರ್ಧಶತಕ ದಾಖಲಿಸಿದ್ದಾರೆ. ಅವರ ಗರಿಷ್ಠ ವಯಕ್ತಿಕ ಮೊತ್ತ ಅಜೇಯ 175 ರನ್.

ಆವೃತ್ತಿಯಲ್ಲಿ ಚೊಚ್ಚಲ ಅರ್ಧಶತಕ

 ಅಸ್ಥಿರ ಬ್ಯಾಟಿಂಗ್‌ನಿಂದಾಗಿ ಮುಜುಗರಕ್ಕೆ ಗುರಿಯಾಗಿದ್ದ ಗೇಲ್, ಲಯನ್ಸ್ ವಿರುದ್ಧ ಅಬ್ಬರದ ಬ್ಯಾಟಿಂಗ್ ನಡೆಸಿದರು. ಎಂದಿನಂತೆ ಶುರುವಿನಲ್ಲಿ ನಿಧಾನಗತಿಯ ಬ್ಯಾಟಿಂಗ್‌ಗೆ ಇಳಿದ ಗೇಲ್, ಆನಂತರದಲ್ಲಿ ಅಕ್ಷರಶಃ ಸುನಾಮಿಯಂತಾದರು. ಸ್ಫೋಟಕ ಇನ್ನಿಂಗ್ಸ್ ಕಟ್ಟುವ ಮುಂಚೆ ಜೀವದಾನ ಪಡೆದ ಗೇಲ್ ಈ ಅವಕಾಶವನ್ನು ಭರ್ಜರಿಯಾಗಿಯೇ ಬಳಸಿಕೊಂಡರು. 19 ಎಸೆತಗಳಲ್ಲಿ 44 ರನ್ ಗಳಿಸಿದ್ದ ವೇಳೆ ಜಡೇಜಾ ಬೌಲಿಂಗ್‌ನಲ್ಲಿ ಬ್ರೆಂಡನ್ ಮೆಕಲಂ ಅಮೋಘ ಕ್ಯಾಚ್ ಪಡೆದರೂ, ಬೌಂಡರಿ ಗೆರೆ ತಾಕಿದ ಕಾರಣ ಗೇಲ್ ಈ ಜೀವದಾನ ಪಡೆದರು. ಕ್ರೀಸ್‌ನಲ್ಲಿ ಇದ್ದಷ್ಟು ಸಮಯ ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿದ ಗೇಲ್ ಈ ಋತುವಿನ ಐಪಿಎಲ್‌ನಲ್ಲಿ ಮೊದಲ ಅರ್ಧಶತಕ ಪೂರೈಸಿದರು.

ಸಂಕ್ಷಿಪ್ತ ಸ್ಕೋರ್:

ಆರ್‌ಸಿಬಿ 20 ಓವರ್‌ಗಳಲ್ಲಿ 213/2 (ಗೇಲ್ 77, ಕೊಹ್ಲಿ 64, ಥಂಪಿ 1/31)

ಗುಜರಾತ್ 20 ಓವರ್‌ಗಳಲ್ಲಿ 192/7 (ಮೆಕ್ಕಲಂ 72,ಕಿಶನ್ 39, ಚಾಹಲ್ 3/31)

ಪಂದ್ಯ ಶ್ರೇಷ್ಠ: ಕ್ರಿಸ್ ಗೇಲ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿವ್ಯಾಂಗ ಯುವತಿ ಮೇಲೆ ಬಲಾತ್ಕಾರ: ಯಾರಿಗೂ ಹೇಳದಂತೆ ಬೆದರಿಕೆ!
ಹೋರಾಟದ ದನಿ ಅಡಗಿಸಲು ಈ ದೂರೇ? ರೈತರು, ಕನ್ನಡ ಪರ ಹೋರಾಟಗಾರರ ವಿರುದ್ಧ ತಲಾ 41 ಪ್ರಕರಣ ದಾಖಲು!