ಈಶ್ವರಪ್ಪ ವಿರುದ್ಧ ಮುಂದುವರಿದ ಸಹಿ ಸಮರ

By Suvarna Web DeskFirst Published Jan 26, 2017, 1:21 PM IST
Highlights

ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಹಿನ್ನಲೆಯಲ್ಲಿ ನಾಳೆ ಅಗತ್ಯವಾದರೆ ಅಮಿತ್​ ಶಾಗೆ ಈ ಪತ್ರ ನೀಡುವ ಉದ್ದೇಶದಿಂದಲೇ ಸಹಿ ಸಂಗ್ರಹ ಮುಂದುವರಿದಿರುವುದನ್ನು ಬಿಜೆಪಿ ಉನ್ನತ ಮೂಲಗಳು ಖಚಿತಪಡಿಸಿವೆ.

ಬೆಂಗಳೂರು (ಜ.26):  ಸಂಗೊಳ್ಳಿ ರಾಯಣ್ಣ ಬ್ರಿಗೇಡ್​ ಚಟುವಟಿಕೆಗಳ ಹಿನ್ನಲೆಯಲ್ಲಿ ವಿಪಕ್ಷ ನಾಯಕ ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಯಡಿಯೂರಪ್ಪ ಬೆಂಬಲಿಗರು ನಡೆಸುತ್ತಿದ್ದ ಸಹಿಸಂಗ್ರಹ ಮುಂದುವರಿದಿದೆ.

ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಪ್ರತ್ಯೇಕ ಪತ್ರಗಳಿಗೆ ಸಹಿ ಪಡೆಯಲಾಗುತ್ತಿದೆ.  ನಿನ್ನೆಯಷ್ಟೇ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರೇ ಈಶ್ವರಪ್ಪ ವಿರುದ್ಧ ಸಹಿಸಂಗ್ರಹ ಬೇಡ ಎಂದು ಹೇಳಿದ್ದರು.

ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಹಿನ್ನಲೆಯಲ್ಲಿ ನಾಳೆ ಅಗತ್ಯವಾದರೆ ಅಮಿತ್​ ಶಾಗೆ ಈ ಪತ್ರ ನೀಡುವ ಉದ್ದೇಶದಿಂದಲೇ ಸಹಿ ಸಂಗ್ರಹ ಮುಂದುವರಿದಿರುವುದನ್ನು ಬಿಜೆಪಿ ಉನ್ನತ ಮೂಲಗಳು ಖಚಿತಪಡಿಸಿವೆ.

ಮುಂದುವರಿದ ಸಹಿ ಸಂಗ್ರಹದಲ್ಲಿ ವಿಧಾನ ಪರಿಷತ್​ ಸದಸ್ಯರಾಗಿರುವ ಹನುಮಂತ ನಿರಾಣಿ, ಗಣೇಶ್​ ಕಾರ್ಣಿಕ್​, ಬಿ.ಜಿ. ಪಾಟೀಲ್​, ಅಮರನಾಥ್​ ಪಾಟೀಲ್​ ಸೇರಿದಂತೆ 9 ಪರಿಷತ್​ ಸದಸ್ಯರು ಸಹಿ ಮಾಡಿದ್ದಾರೆ.

click me!