
ಬೆಂಗಳೂರು[ಜು. 17] ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ ರೆಸಾರ್ಟ್ ನಿಂದ ಎಸ್ಕೇಪ್ ಆಗಿದ್ದಾರೆ ಎಂಬ ಸುದ್ದಿ ಬ್ರೇಕ್ ಆಗಿದೆ. ನೈಟ್ ಡ್ರೆಸ್ ನಲ್ಲಿಯೇ ಮುನಿಯಪ್ಪ ಹೊರಹೋಗಿದ್ದು ಅತೃಪ್ತರ ಬಣ ಸೇರ್ತಾರಾ? ಅಥವಾ ಹಿಂದಕ್ಕೆ ಬರುತ್ತಾರಾ? ಎಂಬ ಪ್ರಶ್ನೆ ಎದ್ದಿದೆ.
ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ರೆಸಾರ್ಟ್ ನಿಂದ ಹೊರಹೋಗಲು ಯತ್ನ ಮಾಡಿದ್ದು ಕಾಂಗ್ರೆಸ್ ಕಾರ್ಯಕರ್ತರು ಅಡ್ಡ ಹಾಕಿದ್ದಾರೆ. ಇಲ್ಲೆ ಹೋಗಿ ಬರ್ತೆನೆ ಬಿಡ್ರಪ್ಪಾ ಅಂದರು ಕಾರ್ಯಕರ್ತರು ಮಾತು ಕೇಳಿತ್ತಿಲ್ಲ. ಗೇಟ್ ನಿಂದಲೇ ಶಾಸಕರನ್ನು ಹಿಂದಕ್ಕೆ ಕಳಿಸಿದ್ದಾರೆ.
ಸರ್ಕಾರ ಉಳಿಸಲು ಕೊನೆ ಕ್ಷಣದಲ್ಲಿ ಗೌಡರ ಅದ್ಭುತ ಪ್ಲ್ಯಾನ್, ಸಲಹೆ ಕೊಟ್ಟ ಮಾಸ್ಟರ್ ಮೈಂಡ್
ರಾಜಕೀಯ ವಾತಾವರಣದ ಬಿಸಿ ಏರಿರುವುದರಿಂದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮೂರು ಪಕ್ಷದ ಶಾಸಕರು ಬೇರೆ ಬೇರೆ ರೆಸಾರ್ಟ್ ಗಳಲ್ಲಿ ವಾಸ್ತವ್ಯ ಹೂಡಿದ್ದರೆ ರಾಜೀನಾಮೆ ಕೊಟ್ಟಿರುವ ಅತೃಪ್ತ ಶಾಸಕರು ಮುಂಬೈನಲ್ಲಿ ಠಿಕಾಣಿ ಹೂಡಿದ್ದಾರೆ. ನಾಳೆ ಅಂದರೆ ಗುರುವಾರ ಸಿಎಂ ಕುಮಾರಸ್ವಾಮಿ ದೋಸ್ತಿಗಳ ಪರವಾಗಿ ವಿಶ್ವಾಸಮತ ಯಾಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಈಗಾಗಲೇ ಅಲ್ಪ ಮತದ ಆತಂಕ ಎದುರಿಸುತ್ತಿರುವ ಸರಕಾರಕ್ಕೆ ಇದೀಗ ಮುನಿಸ್ವಾಮಿ ಶಾಕ್ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.