ಕೊನೆಗೂ ಕೈಗೆ ಸಿಕ್ಕ ಸುಧಾಕರ್ ಗೆ ಸಿದ್ದರಾಮಯ್ಯ ಶಾಂತಿ ಪಾಠ

Published : Sep 23, 2018, 01:27 PM IST
ಕೊನೆಗೂ ಕೈಗೆ ಸಿಕ್ಕ ಸುಧಾಕರ್ ಗೆ ಸಿದ್ದರಾಮಯ್ಯ ಶಾಂತಿ ಪಾಠ

ಸಾರಾಂಶ

ಕಳೆದ ಹದಿನೈದು ದಿನಗಳಿಂದ ಕಾಂಗ್ರೆಸ್ ಹಿರಿಯ ನಾಯಕರ ಕೈಗೆ ಸಿಗದೇ ಬಂಡಾಯದ ಬಾವುಟ ಹಾರಿಸಿದ್ದ ರೆಬೆಲೆ ಶಾಸಕ ಕೊನೆಗೂ ಸಂಪರ್ಕಕ್ಕೆ ಸಿಕ್ಕಿದ್ದಾರೆ. 

ಬೆಂಗಳೂರು (ಸೆ.23): ಕಳೆದ ಹದಿನೈದು ದಿನಗಳಿಂದ ಕಾಂಗ್ರೆಸ್ ಹಿರಿಯ ನಾಯಕರ ಕೈಗೆ ಸಿಗದೇ ಬಂಡಾಯದ ಬಾವುಟ ಹಾರಿಸಿದ್ದ ಶಾಸಕ ಡಾ. ಕೆ. ಸುಧಾಕರ್ ಕೊನೆಗೂ ಸಂಪರ್ಕಕ್ಕೆ ಸಿಕ್ಕಿದ್ದಾರೆ. 

ಅಸಮಾಧನಗೊಂಡ ಚಿಕ್ಕಬಳ್ಳಾಪುರ  ಶಾಸಕ ಡಾ. ಕೆ. ಸುಧಾಕರ್  ಸುಧಾಕರ್ ಅವರನ್ನು ಇಂದು ಸಚಿವ ಜಮೀರ್ ಅಹ್ಮದ್ ಖಾನ್  ಅವರು ಸಿದ್ದರಾಮಯ್ಯ ಬಳಿ ಕರೆತಂದಿದ್ದಾರೆ.​ ಈ ವೇಳೆ ರೆಬೆಲ್ ಶಾಸಕ ಸುಧಾಕರ್ ಗೆ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರು ಶಾಂತಿ ಪಾಠ ಮಾಡಿದ್ದಾರೆ.

ನಿಮ್ಮ ಸಮಸ್ಯೆ ಏನೆ ಇದ್ದರೂ ನನ್ನ ಬಳಿ ಬಂದು ಚರ್ಚಿಸಿ. ನಾನು ಅದನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ. ಅದನ್ನು ಬಿಟ್ಟು ಏಕಾಏಕಿ ಹೈಕಮಾಂಡ್ ತೀರ್ಮಾನದ ವಿರುದ್ಧ ಹೋದರೆ ಹೇಗೆ? ನೀನು ನನ್ನ ಜೊತೆಗಿದ್ದವನು, ನೀನೇ ಹೀಗೆ ಮಾಡಿದ್ರೆ ಹೇಗೆ ?  ಎಂದು ಸಿದ್ದು ಪ್ರಶ್ನಿಸಿದ್ದಾರೆ.

ನಿನ್ನ ಸಮಸ್ಯೆ ಏನೇ ಇದ್ದರೂ ನನ್ನ ಬಳಿ ಹೇಳಿ. ಪಕ್ಷ ನಿಮ್ಮೊಂದಿಗೆ ಇದೆ.  ಎಲ್ಲ ಅಸಮಾಧಾನ ಬಿಟ್ಟು  ಪಕ್ಷದಲ್ಲಿರು. ನಿನ್ನ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಸಿದ್ದು ಸಮಧಾನ ಮಾಡಿದ್ದಾರೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!