ನಿಯಮ ಉಲ್ಲಂಘನೆ: ಸಿದ್ದರಾಮಯ್ಯ ಸೊಸೆ ಪಬ್ ಕ್ಲೋಸ್

By Web DeskFirst Published Nov 9, 2018, 11:46 AM IST
Highlights

ಸಿದ್ದರಾಮಯ್ಯ ಸೊಸೆ ಸ್ಮಿತಾ ರಾಕೇಶ್ ಪಾಲುದಾರಿಕೆಯ ಪಬ್ ಕ್ಲೋಸ್ | ನಿಯಮ ಉಲ್ಲಂಘನೆ ಆರೋಪ  

ಬೆಂಗಳೂರು (ನ. 09): ಮಾಜಿ ಸಿಎಂ ಸಿದ್ದರಾಮಯ್ಯ ಸೊಸೆ  ಸ್ಮಿತಾ ರಾಕೇಶ್ ಪಾಲುದಾರಿಕೆಯ ಪಬ್ ಗೆ ಸಿಸಿಬಿ ಅಧಿಕಾರಿಗಳು ಬೀಗ ಹಾಕಿದ್ದಾರೆ.  ಲಿಮೆರಿಡಿಯನ್ ಹೋಟೇಲ್ ಆವರಣದಲ್ಲಿರೋ ಪಬ್ ಗೆ ಕಳೆದ ಒಂದು ವಾರದ ಹಿಂದೆಯೇ ಸಿಸಿಬಿ ಬೀಗ ಜಡಿದಿದೆ. 

ಬಿಬಿಎಂಪಿಯಲ್ಲಿ ಶೂಟಿಂಗ್ ಮಾಡಿದ್ರೂ ಹೇಳೋರ್ ಕೇಳೋರೇ ಇಲ್ಲ!

ಬೆಳಿಗ್ಗೆ ನಾಲ್ಕು ಗಂಟೆ ತನಕ ಶುಗರ್ ಫ್ಯಾಕ್ಟರಿ ಪಬ್ ನಡೆಸಲಾಗುತ್ತಿತ್ತು. ಅಲ್ಲದೇ ಅಬಕಾರಿ ಇಲಾಖಾ ನಿಯಮಗಳನ್ನು ಪಬ್ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಬೀಗ ಜಡಿದಿದ್ದಾರೆ. 

ಅಯ್ಯೋ! ಇದೇನಾಯ್ತು ಶಿವಣ್ಣಗೆ?

ಈ ಪಬ್ ರಾಕೇಶ್ ಸಿದ್ದರಾಮಯ್ಯ ಆಪ್ತ ರೋಹನ್ ಗೌಡ ಎಂಬುವವರಿಗೆ ಸೇರಿದ್ದಾಗಿದೆ.  ರಾಕೇಶ್ ಸಿದ್ದರಾಮಯ್ಯ ಹೆಂಡತಿ ಸ್ಮಿತಾ ಇದರಲ್ಲಿ ಪಾಲುದಾರಿಕೆ ಹೊಂದಿದ್ದರು.  ಅಬಕಾರಿ ನಿಯಮ ಉಲ್ಲಂಘನೆ ಹಿನ್ನೆಲೆ ಪಬ್ ಕ್ಲೋಸ್ ಮಾಡಿಸಿದ್ದೇವೆ ಎಂದು ಸಿಸಿಬಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. 
 

click me!