2004ರಲ್ಲಿ CM ಪಟ್ಟ ತಪ್ಪಿಸಿರುವುದಕ್ಕೆ ಸಾಕ್ಷಿ ಸಮೇತ ದೊಡ್ಡಗೌಡ್ರ ಮುಖಕ್ಕೆ ತಿವಿದ ಸಿದ್ದು

Published : Aug 23, 2019, 10:48 PM IST
2004ರಲ್ಲಿ CM ಪಟ್ಟ ತಪ್ಪಿಸಿರುವುದಕ್ಕೆ ಸಾಕ್ಷಿ ಸಮೇತ  ದೊಡ್ಡಗೌಡ್ರ ಮುಖಕ್ಕೆ ತಿವಿದ ಸಿದ್ದು

ಸಾರಾಂಶ

ಮೈತ್ರಿ ಸರ್ಕಾರ ಪತನದ ಹಿಂದೆ ತಮ್ಮ ಕೈವಾಡವಿದೆ ಎಂದು  ಬೊಟ್ಟು ಮಾಡಿ ತೋರಿಸಿದ ದೇವೇಗೌಡರ ವಿರುದ್ಧ ಸಿದ್ದರಾಮಯ್ಯ ಅಕ್ಷರಶಃ ಕೆಂಡಾಮಂಡಲರಾಗಿದ್ದಾರೆ. ದೇವೇಗೌಡ್ರ ರಾಜಕೀಯ ಒಳ ಮುಖವಾಡಗಳನ್ನು ಎಳೆ-ಎಳೆಯಾಗಿ ಬಯಲು ಮಾಡುತ್ತಿದ್ದಾರೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಸಿದ್ದು, 2004ರಲ್ಲಿ ತಮಗೆ ಸಿಎಂ ಪಟ್ಟ ತಪ್ಪಿಸಿರುವುದಕ್ಕೆ ಸಾಕ್ಷಿ ಸಮೇತವಾಗಿ ದೇವೇಗೌಡರ ಮುಖಕ್ಕೆ ತಿವಿದಿದ್ದಾರೆ. 

ಬೆಂಗಳೂರು, [ಆ.23]: ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಅವರೇ ಪ್ರಮುಖ ಕಾರಣವೆಂದು ಗುರುವಾರ ಇಡೀ ದಿನ ದೇವೇಗೌಡ್ರು ವಾಗ್ದಾಳಿ ನಡೆಸಿದ್ದರು.

ಈ ಆರೋಪದಿಂದ ರೊಚ್ಚಿಗೆದ್ದಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಇಂದು [ಶುಕ್ರವಾರ] ಬೆಳಗ್ಗೆಯಿಂದ ಇಡೀ ದಿನ ದೇವೇಗೌಡ್ರ ವಿರುದ್ಧ ಕೆಂಡಕಾರಿದರು. ಬೆಳಗ್ಗೆ ಎದ್ದೇಳುತ್ತಲೇ ಮೊದಲಿಗೆ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ದೇವೇಗೌಡ ಕುಟುಂಬದ ಬಂಡವಾಳವನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟರು. 

ಮೈತ್ರಿಯಲ್ಲಿ ಬಿಗ್ ಫೈಟ್; ಸಿದ್ದರಾಮಯ್ಯ ವಿರುದ್ಧ ದೇವೇಗೌಡ ಗಂಭೀರ ಆರೋಪ

ಇಷ್ಟಕ್ಕೆ ಕಡಿಮೆಯಾಗದ ಸಿದ್ದರಾಮಯ್ಯನವರ ಸಿಟ್ಟು, ಸಾಮಾಜಿಕ ಜಾಲತಾಣಗಳಲ್ಲೂ ಸಹ ದೊಡ್ಡಗೌಡ್ರ ಅಸಲಿ ರಾಜಕೀಯ ಮುಖವಾಡಗಳನ್ವನು ಬಟಾಬಯಲು ಮಾಡಿದರು.

ದೇವೇಗೌಡ್ರನ್ನು ಇಷ್ಟಕ್ಕೆ ಬಿಡದ ಸಿದ್ದರಾಮಯ್ಯ ಮತ್ತೊಂದು ಹೆಜ್ಜೆ ಮುಂದೆ ಹೋಗಿ, 2004ರಲ್ಲಿ ತಮಗೆ ಸಿಎಂ ಪಟ್ಟವನ್ನು ಹೇಗೆ ತಪ್ಪಿಸಿದ್ದರು ಎನ್ನುವುದನ್ನು ಸಾಕ್ಷಿ ಸಮೇತ ದೇವೇಗೌಡ್ರಿಗೆ ತಿವಿದಿದ್ದಾರೆ.

2004ರಲ್ಲಿ ಸಿದ್ದರಾಮಯ್ಯ ಅವರಿಗೆ ಸಿಎಂ ಪಟ್ಟ ಸಿಗುವ ಎಲ್ಲಾ ಸಾಧ್ಯತೆಗಳಿದ್ದವು. ಅಂದು ಸ್ವತಃ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಜೆಡಿಎಸ್ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಕೊಡಲು ಮುಂದಾಗಿದ್ದರು. ಆದ್ರೆ ಆ ವೇಳೆ ದೇವೇಗೌಡ್ರು ಹೇಗೆಲ್ಲಾ ಕುತಂತ್ರ ರಾಜಕಾರಣ ಮಾಡಿದ್ದರು ಎನ್ನುವುದನ್ನು ಸಾಕ್ಷಿಗಳ ಸಮೇತ ಫೇಸ್ಬುಕ್ ನಲ್ಲಿ ಹೇಳುವ ಮೂಲಕ ದೇವೇಗೌಡರ ಮುಖಕ್ಕೆ ತಿವಿದಿದ್ದಾರೆ. ಹಾಗಾದ್ರೆ ಸಿದ್ದರಾಮಯ್ಯ ಏನೆಲ್ಲ ಬರೆದುಕೊಂಡಿದ್ದಾರೆ ಎನ್ನುವುದು ಈ ಕೆಳಗಿನಂತಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಡೀಪಾರು ಸಂಕಷ್ಟದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ್ ದೇಗುಲದ್ಲಿ ಪ್ರಾರ್ಥನೆ
ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!