ಬಾದಾಮಿಯಲ್ಲಿ ಸಿದ್ದರಾಮಯ್ಯ ನೂತನ ಮನೆ

Published : Sep 28, 2018, 09:45 AM ISTUpdated : Sep 28, 2018, 02:38 PM IST
ಬಾದಾಮಿಯಲ್ಲಿ ಸಿದ್ದರಾಮಯ್ಯ ನೂತನ ಮನೆ

ಸಾರಾಂಶ

ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸುಸಜ್ಜಿತ ಮನೆ ಹಾಗೂ ನೂತನ ಕಚೇರಿಯನ್ನು ಬಾದಾಮಿ ಪಟ್ಟಣದಲ್ಲಿ ಗುರುವಾರ ಉದ್ಘಾಟಿಸಿದರು. ನಗರದ ಲೋಕೋಪಯೋಗಿ ಇಲಾಖೆಯ ವಸತಿ ಗೃಹವನ್ನು .20 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನವೀಕರಣಗೊಳಿಸುವುದರ ಜೊತೆಗೆ ಹೈಟೆಕ್‌ ಮಾದರಿಯಲ್ಲಿ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ. 

ಬಾದಾಮಿ :  ಮಾಜಿ ಮುಖ್ಯಮಂತ್ರಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅವರು ತಮ್ಮ ಸುಸಜ್ಜಿತ ಮನೆ ಹಾಗೂ ನೂತನ ಕಚೇರಿಯನ್ನು ಬಾದಾಮಿ ಪಟ್ಟಣದಲ್ಲಿ ಗುರುವಾರ ಉದ್ಘಾಟಿಸಿದರು. ನಗರದ ಲೋಕೋಪಯೋಗಿ ಇಲಾಖೆಯ ವಸತಿ ಗೃಹವನ್ನು .20 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನವೀಕರಣಗೊಳಿಸುವುದರ ಜೊತೆಗೆ ಹೈಟೆಕ್‌ ಮಾದರಿಯಲ್ಲಿ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ. ಇಲ್ಲಿಯೇ ಸಿದ್ದರಾಮಯ್ಯ ಅವರು ಬಂದಾಗ ವಾಸ್ತವ್ಯ ಹೂಡಲಿದ್ದಾರೆ.

ಮನೆಯಲ್ಲಿ ಸಂಪೂರ್ಣ ಹವಾನಿಯಂತ್ರಿತ ಕೊಠಡಿಗಳ ಜೊತೆಗೆ ಹೈಟೆಕ್‌ ಫರ್ನಿಚರ್‌ ಕೂಡ ಇಡಲಾಗಿದೆ. ಮನೆಯ ಪಕ್ಕದ ಕಟ್ಟಡದಲ್ಲಿ ಸಾರ್ವಜನಿಕರ ಭೇಟಿಗೆ .5 ಲಕ್ಷ ವೆಚ್ಚದಲ್ಲಿ ನಿರ್ಮಿತವಾದ ಒಂದು ಸಭಾಂಗಣ, ಅಲ್ಲಿಯೇ ಪ್ರತ್ಯೇಕವಾಗಿ ಆಪ್ತ ಸಹಾಯಕರ ಕೊಠಡಿ ಹಾಗೂ ತಲಾ ಮೂರರಂತೆ ಪುರುಷ ಮತ್ತು ಮಹಿಳಾ ಶೌಚಾಲಯವನ್ನು ಅಂದಾಜು .4 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮನೆ ಮುಂದಿನ ಅಂಗಳದಲ್ಲಿ ಇನ್ನೂ ಉದ್ಯಾನ ಮಾದರಿಯಲ್ಲಿ ಹುಲ್ಲು ಹಾಸಿಗೆ ಆಗಬೇಕಾಗಿದೆ.

ನಾಲ್ಕು ಗಂಟೆ ತಡವಾಗಿ ಬಂದರು:

ಗುರು​ವಾರ ಬೆಳಗ್ಗೆಯಿಂದಲೇ ನೂತನ ಮನೆ ಮತ್ತು ಕಚೇರಿ ಬಳಿ ನೂರಾರು ಜನ ಜಮಾಯಿಸಿ ಸಿದ್ದರಾಮಯ್ಯನವರ ಬರುವಿಕೆಗಾಗಿ ಕಾದು ಕುಳಿತಿದ್ದರು. ನಿಗದಿತ ಅವಧಿಗಿಂತ ನಾಲ್ಕು ತಾಸು ತಡವಾಗಿ ಬಂದ ಸಿದ್ದರಾಮಯ್ಯ ಮನೆ ಹಾಗೂ ಕಚೇರಿಯನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು.

ಮೋದಿಗೆ ಟಾಂಗ್‌

ನಾನು ದೇಶದ ಚೌಕಿದಾರ ಎಂದು ಹೇಳಿಕೊಂಡಿದ್ದ ನರೇಂದ್ರ ಮೋದಿ ಇದೀಗ ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ . 40 ಸಾವಿರ ಕೋಟಿ ಹಗರಣದಲ್ಲಿ ಮುಳುಗಿದ್ದಾರೆ ಎಂದು ಮಾಜಿ ಸಿದ್ದರಾಮಯ್ಯ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಗುರು​ವಾರ ಜರುಗಿದ ಬಾದಾಮಿ ಪುರಸಭೆಯ ಕಾಂಗ್ರೆಸ್‌ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಚೌಕಿದಾರ ಎಂದರೆ ದೇಶ ಕಾಯಬೇಕು. ಅದನ್ನು ಬಿಟ್ಟು ರಕ್ಷಣಾ ಇಲಾಖೆಯಲ್ಲೇ ಕಂಡು ಕೇಳರಿಯದ ಹಗರಣದಲ್ಲಿ ಬಿಜೆಪಿಯ ಕೇಂದ್ರ ಸರ್ಕಾರ ಮುಳುಗಿದೆ ಎಂದರು. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬೆಲೆ ಹೆಚ್ಚಳದ ಝಳ ತಾಕೀಸಿತ್ತು. ಜನ ಸಾಮಾನ್ಯರ ಬದುಕನ್ನು ದುಸ್ತರ ಮಾಡಿದೆ. ಹೀಗಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಕೇಂದ್ರದ ಈ ಸರ್ಕಾರ ಶ್ರೀಮಂತರ ಹಿತ ಕಾಯುವ ಸರ್ಕಾರ​ವಾ​ಗಿದೆ ಎಂದು ಟೀಕಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ