ಒಂಟಿ ಸಲಗವಾದರೂ ಪರೋಪಕಾರಿಯಾಗಿರು: ದುನಿಯಾ ವಿಜಿಗೆ ಸಿದ್ದು ಕಿವಿಮಾತು!

Published : Jun 07, 2019, 07:46 AM IST
ಒಂಟಿ ಸಲಗವಾದರೂ ಪರೋಪಕಾರಿಯಾಗಿರು: ದುನಿಯಾ ವಿಜಿಗೆ ಸಿದ್ದು ಕಿವಿಮಾತು!

ಸಾರಾಂಶ

ಒಂಟಿ ಸಲಗ ಯಾವತ್ತಿದ್ರೂ ಡೇಂಜರ್‌: ಸಿದ್ದರಾಮಯ್ಯ| ಒಂಟಿ ಸಲಗವಾದರೂ ಪರೋಪಕಾರಿಯಾಗಿರು| ನಟ ದುನಿಯಾ ವಿಜಿಗೆ ಕಿವಿಮಾತು ಹೇಳಿದ ಸಿದ್ದು

ಬೆಂಗಳೂರು[ಜೂ.07]: ‘ಆನೆ ನಡೆದದ್ದೇ ದಾರಿ ಅಂತಾರೆ. ಅದೇನೋ ನಿಜ. ಆದರೆ ಒಂಟಿ ಸಲಗ ಯಾವತ್ತಿದ್ರೂ ಅಪಾಯನೇ. ಅದು ಒಂಟಿಯಾಗಿದ್ದಾಗ ಭಯಗೊಂಡು ಏನು ಮಾಡುವುದು ಎಂದು ತಿಳಿಯದೇ ಸಿಕ್ಕವರ ಮೇಲೆ ದಾಳಿ ಮಾಡುತ್ತದೆ.’

ಹೀಗೆಂದು ಹೇಳಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

‘ದುನಿಯಾ’ ವಿಜಯ್‌ ನಟನೆ ಮತ್ತು ನಿರ್ದೇಶನದ ಹೊಸ ಚಲನಚಿತ್ರ ‘ಸಲಗ’ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ನಿಮ್ಮ ಚಿತ್ರಕ್ಕೆ ಸಲಗ ಎಂದು ಹೆಸರಿಟ್ಟುಕೊಂಡಿದ್ದೀರಿ. ಇಲ್ಲಿ ಸಲಗಗಳ ಗುಂಪೇ ಇದೆ. ಒಂಟಿ ಸಲಗಗಳಿಗೆ ಯಾವಾಗಲೂ ಭಯ ಮತ್ತು ಆತಂಕ ಒಟ್ಟೊಟ್ಟಿಗೆ ಇರುತ್ತದೆ. ಹಾಗಾಗಿ ಅದು ದಾಳಿ ಮಾಡುತ್ತದೆ. ನೀನು ಒಂಟಿ ಸಲಗವಾಗಿದ್ದರೂ ಪರೋಪಕಾರಿಯಾಗಿರು’ ಎಂದು ದುನಿಯಾ ವಿಜಯ್‌ಗೆ ಹೇಳಿದರು.

ಬಳಿಕ ಸಿನಿಮಾ ತಂಡಕ್ಕೆ ಶುಭ ಹಾರೈಸಿದ ಸಿದ್ದರಾಮಯ್ಯ ‘ನಾನು ಚಿಕ್ಕಂದಿನಲ್ಲಿ ಇದ್ದಾಗ ದಿನಕ್ಕೆ ಒಂದಾದರೂ ಸಿನಿಮಾ ನೋಡುತ್ತಿದ್ದೆ. ಆದರೆ ಈಗ ಎರಡು ವರ್ಷಕ್ಕೆ ಒಂದು ಸಿನಿಮಾ ನೋಡುವಂತೆ ಆಗಿದೆ. ನಿರ್ದೇಶನ ಮಾಡಬೇಕಿದ್ದರೆ ಎಲ್ಲವನ್ನೂ ತಿಳಿದುಕೊಂಡಿರಬೇಕು. ಯಾವ ವಿಷಯವನ್ನು ಹೇಳಬೇಕು ಎಂಬುದು ನಿರ್ದೇಶಕನಾದವನಿಗೆ ಗೊತ್ತಿರಬೇಕು’ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ