
ಬೆಂಗಳೂರು(ಸೆ.11): ಪೊಲೀಸರು ಕಾನೂನು ಪಾಲಿಸಬೇಕು. ತಪ್ಪಿತಸ್ಥರನ್ನು ಮಟ್ಟಹಾಕಿ ಕಾನೂ ಕ್ರಮಕ್ಕೆ ಒಳಪಡಿಸಬೇಕು. ಆದರೆ ಇಲ್ಲಿ ತದ್ವಿರುದ್ಧವಾದ ಘಟನೆಯೊಂದು ನಡೆದಿದೆ. ಕೇಸು ದಾಖಲು ಮಾಡಲು ಹೊರಟಿದ್ದ ಅಧಿಕಾರಿಯೊಬ್ಬರು ಒಂದೇ ಒಂದು ಅವಾಝ್ ಗೆ ಕೇಸ್ ಕ್ಲೋಸ್ ಮಾಡಿದ ಕಥೆ ಇದು.
ನಿನ್ನೆ ಬೆಳಗಿನ ಜಾವ ತಿಲಕ್ನಗರ ಪೊಲೀಸರು ಅಕ್ರಮ ಜಾನುವಾರು ಸಾಗಾಣಿಕೆ ನಡೀತಿದೆ ಅನ್ನೋ ಪಕ್ಕಾ ಮಾಹಿತಿ ಮೇರೆಗೆ ರೇಡ್ ಮಾಡಿದರು. ದಾಳಿ ವೇಳೆ ಹಸುಗಳನ್ನ ತುಂಬಿದ್ದ ಟ್ರಕ್ ಚಾಲಕ ಓಡಿಹೋದ. ಎಸ್ಐ ತಿಮ್ಮರಾಜು ಸಾಹೇಬ್ರು ಹಸುಗಳನ್ನು ಟ್ರಕ್ ಸಮೇತ ಠಾಣೆಗೆ ತಂದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಅದೆಲ್ಲಿಂದಲೋ ಒಂದು ಗುಂಪು ಏಕಾಏಕಿ ಠಾಣೆಗೆ ದಾಳಿ ಇಟ್ಟರು.
ತಿಲಕ್ನಗರ ಸಬ್ ಇನ್ಸ್ಪೆಕ್ಟರ್ ತಿಮ್ಮರಾಜು ಗೋ ಹತ್ಯಾ ನಿಷೇಧ ಕಾಯ್ದೆಯಡಿ ಕೇಸು ದಾಖಲಿಸೋ ಪ್ರೊಸೀಜರ್ ನಡೆಸುತ್ತಿದ್ದರು. ಅಷ್ಟರಲ್ಲಿ ಮುಜೀಬ್ ಮತ್ತು ಮುನಾವರ್ ಎಂಬ ಇಬ್ಬರು ವ್ಯಕ್ತಿಗಳು ಗುಂಪು ಕಟ್ಟಿಕೊಂಡು ಬಂದರು. ಠಾಣಾ ವ್ಯಾಪ್ತಿಯ ಕೆಲ ಅಂಗಡಿಗಳನ್ನ ಬಂದ್ ಮಾಡಿ ಹಸುಗಳನ್ನ ಹಿಡಿದಿದ್ಯಾಕೆ ಅಂತಾ ಪಿಎಸ್ಐಗೆ ಅವಾಜ್ ಹಾಕಿದ್ದಾರೆ.
ಇವರ ಬೆದರಿಕೆಗೆ ಮಣಿದ ಎಸ್ಐ ನಿಮ್ಮ ಹಸುಗಳ ತಂಟೆಗೆ ಬರಲ್ಲ, ಇನ್ಮೇಲೆ ನೀವ್ ಆರಾಮಾಗಿ ಹಬ್ಬ ಮಾಡ್ಕೊಳ್ಳಿ ಅನ್ನೋ ಮಾತನ್ನಾಡಿದ ಆಡಿಯೋ ಸುವರ್ಣ ನ್ಯೂಸ್ಗೆ ಲಭ್ಯವಾಗಿದೆ. ಅಷ್ಟೇ ಅಲ್ಲ ಹಸುಗಳನ್ನ ಕೂಡ ಬಿಟ್ಟು ಕಳುಹಿಸಿದ್ದಾರೆ. ನೋಡಿದ್ರಲ್ವಾ. ಎಂಥಾ ಬಲಿಷ್ಟರನ್ನಾದರೂ ಮಟ್ಟ ಹಾಕಬೇಕಿದ್ದ ಖಾಕಿ, ಇಂಥ ಗೊಡ್ಡು ಬೆದರಿಕೆಗೆ ಮಣಿಯುವಂತಾಯ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.