ಮದರಸಾಗಳನ್ನು ನಿಷೇಧಿಸಿ: ಪ್ರಧಾನಿಗೆ ಪತ್ರ ಬರೆದ ಮುಸ್ಲಿಂ ಮುಖಂಡ!

Published : Jan 22, 2019, 07:26 PM ISTUpdated : Jan 22, 2019, 07:44 PM IST
ಮದರಸಾಗಳನ್ನು ನಿಷೇಧಿಸಿ: ಪ್ರಧಾನಿಗೆ ಪತ್ರ ಬರೆದ ಮುಸ್ಲಿಂ ಮುಖಂಡ!

ಸಾರಾಂಶ

ಉತ್ತರ ಪ್ರದೇಶ ಸೆಂಟ್ರಲ್ ಶಿಯಾ ವಕ್ಫ್ ಬೋರ್ಡ್ ಅಧ್ಯಕ್ಷರೊಬ್ಬರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಮದರಸಾಗಳನ್ನೇ ನಿಷೇಧ ಮಾಡಲು ಕೋರಿ ಪತ್ರ ಬರೆದಿರುವುದು ಚರ್ಚೆಗೆ ವೇದಿಕೆಯಾಗಿದೆ.

ನವದೆಹಲಿ[ಜ.22]  ಈ ಹೇಳಿಕೆ ವಿವಾದವನ್ನು ಹೊತ್ತಿಸಿದೆ. ಇಡೀ ದೇಶದಲ್ಲಿರುವ ಮದರಸಾಗಳನ್ನು ಬಂದ್ ಮಾಡಬೇಕು ಎಂದಿಉ ಪ್ರಧಾನಿಗೆ ಪತ್ರ ಬರೆದಿರುವುದು ಈಗ ದೊಡ್ಡ ಸುದ್ದಿಯಾಗುತ್ತಿದೆ. ಪ್ರಧಾನಿಗೆ ಪತ್ರ ಬರೆದಿರುವ ವಸೀಮ್ ರಿಜ್ವಿ , ಮದರಸಾಗಳ ಮೂಲಕ ಮುಸ್ಲಿಂ ಮಕ್ಕಳು ಉಗ್ರರ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು. ದೇಶದಲ್ಲಿ ಒಂದೇ ಸಿವಿಲ್ ಕಾನೂನು ಬರಬೇಕು. ಮುಸ್ಲಿಂ ಮಕ್ಕಳು ತಮಗೆ ಬೇಕು ಎಂದಾದರೆ ಮದರಸಾಗಳಿಗೆ ದಾಖಲಾತಿ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.

ಬಂದ್ ನಡುವೆ ಸಮಸ್ತ ಜನತೆಗೆ ನರೇಂದ್ರ ಮೋದಿ ಬರೆದ ಪತ್ರ...

ಐಎಸ್‌ಐಎಸ್‌ ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಮಕ್ಕಳನ್ನು ಮದರಸಾಗಳ ಮೂಲಕವೇ ಟಾರ್ಗೆಟ್ ಮಾಡುತ್ತಿದೆ. ಗುಪ್ತಚರದಳ ಕಲೆ ಹಾಕಿರುವ ಮಾಹಿತಿಯೂ ಸಹ ಇದೇ ಅಶವನ್ನು ಸಾರಿ ಹೇಳಿದೆ. ಒಟ್ಟಿನಲ್ಲಿ ಮುಸಲ್ಮಾನ ಮುಖಂಡರೊಬ್ಬರೆ ಈ ಹೇಳಿಕೆ ನೀಡಿ ಪ್ರಧಾನಿಗೆ ಪತ್ರ ಬರೆದಿರುವುದು ಪರ ಮತ್ತು ವಿರೋಧದ ಚರ್ಚೆಗೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು