
ಮೈಸೂರು(ಎ.07): ಸಿಎಂ ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿ ಉಪಸಮರದ ಅಖಾಡಕ್ಕಿಳಿದು ನಿತ್ಯ ಸಿಎಂ ವಿರುದ್ಧ ಗುರುತರ ಆಪಾದನೆಗಳ ಮಾಡಿ ಚಾಲೆಂಜ್ ಮಾಡುತ್ತಿದ್ದ ಶ್ರೀನಿವಾಸ ಪ್ರಸಾದ್, ಗೃಹಸಚಿವ ಪರಮೇಶ್ವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಏನದು ಆರೋಪ? ಇಲ್ಲಿದೆ ವಿವರ.
ಗೃಹಸಚಿವ ಪರಮೇಶ್ವರ್'ಗೆ ಸವಾಲ್ ಎಸೆಯುವಂತೆ 'ಅವರು ಸಚಿವರಾಗಿದ್ದು ದುಡ್ಡು ಕೊಟ್ಟು ಅಂತ' ಶ್ರೀನಿವಾಸ ಪ್ರಸಾದ್ ಆಪಾದನೆ ಮಾಡಿದ್ದಾರೆ.ಹೀಗೆ ಉಪಚುನಾವಣೆಯ ಅಂಗಳದಿಂದ ಗಂಭೀರ ಚರ್ಚೆಗೆ ಇಂಬು ನೀಡಿದ್ದಾರೆ. ಇತ್ತೀಚೆಗಷ್ಟೇ ಸಚಿವ ಪ್ರಮೋದ್ ಮಧ್ವರಾಜ್ ಹೈಕಮಾಂಡ್ ಗೆ ೧೦ ಕೋಟಿ ರೂಪಾಯಿ ಕೊಟ್ಟು ಸಚಿವರಾಗಿದ್ದಾರೆ ಎಂದಿದ್ದ ಶ್ರೀನಿವಾಸ ಪ್ರಸಾದ್ ಈಗ ಪರಮೇಶ್ವರ ಪ್ರಸಂಗ ತೆರೆದಿಟ್ಟಿದ್ದಾರೆ.
ಶ್ರೀನಿವಾಸ್ ಪ್ರಸಾದ್ , ಗೃಹಸಚಿವರೂ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಪರಮೇಶ್ವರ್ ವಿರುದ್ಧವೇ ಈ ಆಪಾದನೆ ಮಾಡಿದ್ದು, ಅದೂ ಕೂಡ ಚುನಾವಣಾ ಅಖಾಡದಿಂದಲೇ ಆರೋಪಿಸಿರುವುದರಿಂದ ಜನ ಸಹಜವಾಗಿ ಅನುಮಾನದ ಕಣ್ಣುಗಳಿಂದ ನೋಡಲಾರಂಭಿಸಿದ್ದಾರೆ. ಹೀಗಾಗಿ ಉತ್ತರಿಸಿ ಜನರಿಗೆ ಸ್ಪಷ್ಟಪಡಿಸಬೇಕಾದ ಅನಿವಾರ್ಯತೆ ಪರಮೇಶ್ವರ್ ಅವರದ್ದಾಗಿದೆ. ಅದೇನೇ ಇದ್ದರೂ, ಈ ಹೇಳಿಕೆಯ ಮೂಲಕ ಶ್ರೀನಿವಾಸ್ ಪ್ರಸಾದ್, ಉಪಸಮರದ ಅಖಾಡದಲ್ಲಿ ಮತದಾನಕ್ಕೆ ಎರಡು ದಿನಗಳಿರುವಾಗ ಮತ್ತೊಂದು ಚರ್ಚೆಗೆ ಗ್ರಾಸವಾಗಿದೆ .
ವರದಿ: ವೀರೇಂದ್ರ ಉಪ್ಪುಂದ, ಸುವರ್ಣನ್ಯೂಸ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.