
ಬೆಂಗಳೂರು(ಏ.06): ಬಿಗ್ ಬಾಸ್ ವಿನ್ನರ್ ಪ್ರಥಮ್ ಹುಚ್ಚಾಟ ಹೆಚ್ಚಾಗಿದ್ದು, ಇಂದೂ ಕೂಡ ಹೈಡ್ರಾಮ ಮುಂದುವರೆದಿದೆ. ಪೋರ್ಟೀಸ್ ಐಸಿಯೂ ಉಡೀಸ್ ಮಾಡಿ ಆಸ್ಪತ್ರೆ ಹೊರಬಿದ್ದ ಪ್ರಥಮ್, ನಿಮ್ಹಾನ್ಸ್ಗೆ ಹೋಗಿ ಕೊನೆಗೆ ಕಿಮ್ಸ್ ಅಡ್ಮಿಟ್ ಆಗಿದ್ದಾನೆ.
ಮಾನಸಿಕ ಒತ್ತಡಕ್ಕೆ ಒಳಗಾಗಿ ನಿದ್ರೆ ಮಾತ್ರೆ ನುಂಗಿ ಆಸ್ಪತ್ರೆ ಸೇರಿರುವ ಬಿಗ್ಬಾಸ್ ಪ್ರಥಮ್ ಹುಚ್ಚಾಟ ಮಿತಿಮೀರಿದೆ. ಐಸಿಯೂದಲ್ಲಿದ್ದರೂ ವೈದ್ಯರ ಮಾತು ಕೇಳದೇ ರಂಪಾಟ ಮಾಡಿ ಪೋರ್ಟೀಸ್ನಿಂದ ಹೊರ ಬಿದ್ದು ಆಸ್ಪತ್ರೆ ಕಿಮ್ಸ್ ಆಸ್ಪತ್ರೆಯಲ್ಲಿ ಐಸಿಯೂದಲ್ಲಿ ಮಲಗಿದ್ದಾನೆ.
ತನಗೆ ಮಾನಸಿಕವಾಗಿ ನೋವಾಗಿದೆ ಎಂದು ಫೆಸ್ಬುಕ್ ಲೈವ್ನಲ್ಲಿ ನಿದ್ರೆ ಮಾತ್ರೆ ನುಂಗಿದ್ದ ಪ್ರಥಮ್, ಪೋರ್ಟೀಸ್ ಆಸ್ಪತ್ರೆ ಐಸಿಯೂದಲ್ಲಿ ಬೆತ್ತಲಾಗಿ ರಂಪಾಟ ನಡೆಸಿದ್ದಾನೆ, ನಿನ್ನೆ ಮಧ್ಯಾಹ್ನವೇ ಪ್ರಥಮ್ ರಂಪಾಟ ಕಂಡು ಆಸ್ಪತ್ರೆಯಿಂದ ಕರೆಯೊಯ್ಯುವಂತೆ ಪೋರ್ಟಿಸ್ ಆಸ್ಪತ್ರೆ ವೈದ್ಯರು ಸೂಚಿಸಿದ್ದರು. ಆದ್ರೆ ಪೋಷಕರ ಒತ್ತಯದ ಮೇರೆಗೆ ಚಿಕಿತ್ಸೆ ಮುಂದುವರೆಸಲಾಗಿತ್ತು. ರಾತ್ರಿ ವೇಳೆ ಹುಚ್ಚಾಟ ಮತ್ತೆ ಶುರು ಮಾಡಿದ್ದ ಪ್ರಥಮ್ ಪೊಲೀಸರು ಬಂದ ವೇಳೆ ಬಾತ್ರೂಂ ಸೇರಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾನೆ. ಆತಂಕಗೊಂಡ ಪೊಲೀಸರು ಬಾಗಿಲು ಹೊಡೆದು ಪ್ರಥಮ್ನನ್ನು ರಕ್ಷಿಸಿದರು. ನಂತರ ಪೋರ್ಟಿಸ್ ವೈದ್ಯರು ನಿಮಾನ್ಸ್ಗೆ ಕರೆದೊಯ್ಯುವಂತೆ ಸೂಚಿಸಿದರು. ಬೆಳಗಿನ ಜಾವ 4 ಗಂಟೆಗೆ ನಿಮ್ಹಾನ್ಸ್ಗೆ ಕರೆದೊಯ್ದ ವೇಳೆ ಪ್ರಥಮ್ ಮತ್ತೆ ರಂಪಾಟ ಮಾಡಿದ್ದರಿಂದ ಕಿಮ್ಸ್ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಿಮ್ಸ್ ವೈದ್ಯರು ಪ್ರಥಮ್ ಜೊತೆ ಮಾತನಾಡಲು ಯತ್ನಿಸಿದ್ದು, ತಾನು 20 ಮಾತ್ರೆ ನುಂಗಿರುವುದಾಗಿ ಹೇಳುತ್ತಿದ್ದಾನೆ, 20 ಮಾತ್ರೆ ನುಂಗಿದರೆ, ಉಸಿರಾಟದ ತೊಂದರೆ, ವಾಂತಿ ಆಗಬೇಕು. ಆ ರೀತಿಯ ಯಾವ ಲಕ್ಷಣಗಳು ಕಾಣುತ್ತಿಲ್ಲ. ಪ್ರಥಮ್ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿರುವುದರಿಂದ ಇಂಜಕ್ಷನ್ ನೀಡಿ ನಿದ್ರೆ ಮಾಡಲು ಬಿಟ್ಟು, ಅಬ್ಸರ್ವೇಷನ್ ಮಾಡುತ್ತಿದ್ದೇವೆ. ಆದರೆ ಯಾವುದೇ ಪ್ರಾಣಾಪಾಯ ಇಲ್ಲ ಎಂದು ಖಚಿತಪಡಿಸಿದ್ದಾರೆ.
ಆದರೆ, ಕಿಮ್ಸ್ನಲ್ಲಿಯೂ ವೈದ್ಯರ ಜೊತೆ ಮಾತನಾಡಲು ನಿರಾಕರಿಸಿದ್ದಾನೆ. ಆತ ಹೇಳುತ್ತಿರುವುದಕ್ಕೂ, ಲಕ್ಷಣಗಳಿಗೂ ಯಾವುದೇ ತಾಳೆ ಇಲ್ಲದ ಕಾರಣ ಕಿಮ್ಸ್ ವೈದ್ಯರ ಕನ್ಫೂಸ್ ಆಗಿದ್ದಾರೆ. ಈ ಮಧ್ಯೆ ಪ್ರಥಮ್ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ ಆತ್ಮಹತ್ಯೆ ಪ್ರಕರಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.