ಸೀತಾಪುರ್(ಸೆ.26): ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೇಲೆ ಶೂ ಎಸೆದಿದ್ದಾರೆ. ಉತ್ತರ ಪ್ರದೇಶದ ಸೀತಾಪುರ್'ನಲ್ಲಿ ರಾಹುಲ್ ಗಾಂಧಿ ಕಿಸಾನ್ ಯಾತ್ರೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಕಿಸಾನ್ ಯಾತ್ರೆಯ ವೇಳೆ 25 ವರ್ಷದ ಸ್ಥಳೀಯ ಯುವಕ ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ಶೂ ಎಸೆದಿದ್ದಾರೆ. ಅದೃಷ್ಟವಶಾತ್ ಆ ಶೂ ರಾಹುಲ್ ಗಾಂಧಿಗೆ ಬಿದ್ದಿಲ್ಲ. ರಾಹುಲ್ ಗಾಂಧಿ ಬೆನ್ನ ಹಿಂದೆ ನಿಂತಿದ್ದ ಕಾರ್ಯಕರ್ತನಿಗೆ ಶೂ ತಗುಲಿದೆ.
ಘಟನೆಯಿಂದ ಕೂಡಲೇ ಎಚ್ಚೆತ್ತ ಪೊಲೀಸರು ಶೂ ಎಸೆದ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.