ರಾಜಕೀಯ ಪಕ್ಷಗಳಿಗೆ ಶಾಕ್ ಕೊಟ್ಟ ಬಜೆಟ್

By Suvarna Web DeskFirst Published Feb 1, 2017, 3:06 PM IST
Highlights

2 ಸಾವಿರಕ್ಕಿಂತ ಹೆಚ್ಚು ದೇಣಿಗೆಯನ್ನು ಚೆಕ್ ಅಥವಾ ಡಿಜಿಟಲ್ ಮಾದರಿಯಲ್ಲಿಯೇ ಪಾವತಿ ಮಾಡಬೇಕು.

ನವದೆಹಲಿ (ಫೆ.01): ಈ ಬಾರಿಯ ಬಜೆಟ್'ನಲ್ಲಿ ರಾಜಕೀಯ ಪಕ್ಷಗಳಿಗೆ ಬಿಗ್ ಶಾಕ್ ಕೊಡಲಾಗಿದೆ. ಯಾವುದೇ ರಾಜಕೀಯ ಪಕ್ಷಗಳಿಗೆ ಒಬ್ಬ ವ್ಯಕ್ತಿ 2 ಸಾವಿರ ರೂಪಾಯಿಗಿಂತ ಹೆಚ್ಚು ದೇಣಿಗೆ ನೀಡಿದರೆ ಆತನ ವಿವರ ಕೊಡುವುದು ಕಡ್ಡಾಯ ಎಂದು ಹೇಳಿದೆ.

ಅಲ್ಲದೇ ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ ಸಂಬಂಧ ಕೇಂದ್ರ ನಿಯಮ ರೂಪಿಸಿದ್ದು, 2 ಸಾವಿರ ರೂಪಾಯಿ ಮಾತ್ರ ನಗದಿನಲ್ಲಿ ಪಾವತಿಸಬಹುದಾಗಿದೆ. 2 ಸಾವಿರಕ್ಕಿಂತ ಹೆಚ್ಚು ದೇಣಿಗೆಯನ್ನು ಚೆಕ್ ಅಥವಾ ಡಿಜಿಟಲ್ ಮಾದರಿಯಲ್ಲಿಯೇ ಪಾವತಿ ಮಾಡಬೇಕು.

click me!