ಸುಕ್ಮಾ: ಕೇಂದ್ರ ಸರ್ಕಾರ ವಿರುದ್ಧ ಶಿವಸೇನೆ ಗರಂ

By Suvarna Web DeskFirst Published Apr 27, 2017, 1:20 PM IST
Highlights

ಸಿಆರ್’ಪಿಎಫ್ ಜವಾನರ ಹತ್ಯೆಗೆ ಪ್ರತೀಕಾರ ತೀರಿಸುತ್ತೇವೆಯೆಂದು ಹೇಳಿಕೆ ನೀಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ, ಎಂದು ಪ್ರಧಾನಿ ಮೋದಿ ಹಾಗೂ ಗೃಹಮಂತ್ರಿ ರಾಜನಾಥ್ ಸಿಂಗ್ ವಿರುದ್ಧ ಸಾಮ್ನಾ ಸಂಪಾದಕೀಯದಲ್ಲಿ ಟೀಕಿಸಲಾಗಿದೆ.

ಮುಂಬೈ (ಏ.27): ಸುಕ್ಮಾದಲ್ಲಿ ನಕ್ಸಲರು 26 ಯೊಧರನ್ನು ಹತ್ಯೆಗೈದಿರುವ ಘಟನೆಗೆ ಪ್ರತಿಕ್ರಿಯಿಸಿರುವ ಶಿವಸೇನೆ, ಸಮರ್ಪಕವಾದ ಉಗ್ರವಾದ-ವಿರೋಧಿ ನೀತಿಯನ್ನು ರೂಪಿಸುವಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆಯೆಂದು ಹೇಳಿದೆ.

ಸಿಆರ್’ಪಿಎಫ್ ಜವಾನರ ಹತ್ಯೆಗೆ ಪ್ರತೀಕಾರ ತೀರಿಸುತ್ತೇವೆಯೆಂದು ಹೇಳಿಕೆ ನೀಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ, ಎಂದು ಪ್ರಧಾನಿ ಮೋದಿ ಹಾಗೂ ಗೃಹಮಂತ್ರಿ ರಾಜನಾಥ್ ಸಿಂಗ್ ವಿರುದ್ಧ ಸಾಮ್ನಾ ಸಂಪಾದಕೀಯದಲ್ಲಿ ಟೀಕಿಸಲಾಗಿದೆ.

ಉಗ್ರರ ಹೇಯಕೃತ್ಯಕ್ಕೆ ನಮ್ಮ ಯೋಧರು ಬಲಿಯಾಗುತ್ತಿದ್ದಾರೆ. ಛತ್ತೀಸ್’ಘಡದಲ್ಲಿ 26 ಮಂದಿ ಹುತಾತ್ಮರಾಗಿದ್ದಾರೆ.  ಇಂಥ ಕೃತ್ಯಗಳನ್ನು ಸಹಿಸುವುದಿಲ್ಲವೆಂದು ಗೃಹ ಮಂತ್ರಿ ಹೇಳುತ್ತಾರೆ, ಆದರೆ ಕಳೆದ ಒಂದು ತಿಂಗಳಿನಲ್ಲಿ 100 ಮಂದಿ ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಕೇವಲ ಮಾತುಗಳನ್ನಾಡಿದರೆ ಸಾಲದು, ಪರಿಸ್ಥಿತಿಯನ್ನು ನಿಭಾಯಿಸಲು ಯಾಕೆ ಸಾಧ್ಯವಾಗುತ್ತಿಲ್ಲ? ಎಂದು ಶಿವಸೇನೆ ಪ್ರಶ್ನಿಸಿದೆ.

click me!