ಬೈಕ್ ಬೋರಿಗೆ, ನೊಂದ ಶಿಕಾರಿಪುರದ ವಾಹನ ಪ್ರೇಮಿ ಆತ್ಮಹತ್ಯೆ

Published : Nov 14, 2018, 06:19 PM ISTUpdated : Nov 14, 2018, 06:27 PM IST
ಬೈಕ್ ಬೋರಿಗೆ, ನೊಂದ ಶಿಕಾರಿಪುರದ ವಾಹನ ಪ್ರೇಮಿ ಆತ್ಮಹತ್ಯೆ

ಸಾರಾಂಶ

ಆತ ತನಗಿಂತಲೂ, ತನ್ನ ಹೆಂಡತಿಗಿಂತಲೂ ತನ್ನ ಬೈಕ್  ಅನ್ನೇ ಹೆಚ್ಚು ಪ್ರೀತಿಸುತ್ತಿದ್ದ. ಇದ್ದಕ್ಕಿದ್ದಂತೆ ಅವರ ಬೈಕ್ ಕೈ ಕೊಟ್ಟಿತು. ಒಮ್ಮೆ ದುರಸ್ತಿ ಮಾಡಿ ತಂದರೆ ಮತ್ತೆ ಮತ್ತೆ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಅದೊಂದು ದಿನ ಗ್ಯಾರೇಜ್ ಗೆ ತೆರಳಿದ್ದಾಗ ಬೈಕ್  ದುರಸ್ತಿಗೆ ಬೈಕ್ ಗೆ ನೀಡಿದ ಅರ್ಧದಷ್ಟು ಹಣ ಬೇಕು ಎಂಬ ಸಂಗತಿ ಅವರಿವಿಗೆ ಬಂದಿದೆ.  ಮನನೊಂದ ಮಾಲೀಕ ಅಂತಿಮಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶಿಕಾರಿಪುರ[ನ.15]  ಬೈಕ್ ದುರಸ್ತಿಗೆ [ಬೋರ್‌ ಗೆ ಬಂದಿದೆ]  ಸಾಕಷ್ಟು ಹಣ ವ್ಯಯವಾಗುತ್ತದೆ ಎಂದು ಭಯಭೀತನಾದ ವಾಹನ ಪ್ರೇಮಿ ಆತ್ಮಹತ್ಯೆಗೆ ಶರಣಾಗಿದ್ದಾರೆ.  ಶಿಕಾರಿಪುರದ ಅಂಜನಾಪುರದ ರುದ್ರಪ್ಪ [42] ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೈಕ್ ಮೇಲಿನ ಪ್ರೀತಿ ಒಂದು ಕಡೆ ಇದ್ದರೆ ರುದ್ರಪ್ಪ ಅವರಿಗೆ ಮದ್ಯ ಸೇವನೆ ಅಭ್ಯಾಸವೂ ಇತ್ತು ಎನ್ನಲಾಗಿದೆ. ಮದ್ಯ ಸೇವಿಸಿ ಸಂಜೆ ಗ್ಯಾರೇಜಿಗೆ ಹೋದಾಗ ಬೈಕ್ ಬೋರಿಗೆ ಬಂದ ಸಂಗತಿ ಗೊತ್ತಾಗಿದೆ. ತಕ್ಷಣ ಮನೆಗೆ ಬಂದು ತಂದಿಟ್ಟ ಕ್ರಿಮಿನಾಶಕ ಸೇವಿಸಿದ್ದಾರೆ. ಚಿಕಿತ್ಸೆಯೂ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಪತಿ ಮನೆಗೆ ಬರಲು ತಡವಾಯಿತೆಂದು ಕುಮಟಾದ ಉಪನ್ಯಾಸಕಿ ಆತ್ಮಹತ್ಯೆ

ರುದ್ರಪ್ಪ ಅವರಿಗೆ ಹೆಂಡತಿ ಮತ್ತು ಇಬ್ಬರು ಮಕ್ಕಳು ಇದ್ದಾರೆ. ಹೆಣ್ಣು ಸಿಗಲಿಲ್ಲ ಎಂದು ಆತ್ಮಹತ್ಯೆ,  ಗಂಡ ಬೈದಿದ್ದಕ್ಕೆ ಆತ್ಮಹತ್ಯೆ, ಲೇಟಾಗಿ ಬಂದಿದ್ದಕ್ಕೆ ಆತ್ಮಹತ್ಯೆ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ.


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!
ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್