ಬೆಂಗಳೂರಿನಲ್ಲಿ ಶೀಲಾ ದೀಕ್ಷಿತ್ ಅಳಿಯನ ಸೆರೆ

Published : Nov 13, 2016, 06:48 AM ISTUpdated : Apr 11, 2018, 01:10 PM IST
ಬೆಂಗಳೂರಿನಲ್ಲಿ ಶೀಲಾ ದೀಕ್ಷಿತ್ ಅಳಿಯನ ಸೆರೆ

ಸಾರಾಂಶ

ಬೆಂಗಳೂರಿನ ಹಲಸೂರಿನಲ್ಲಿ ವಾಸವಾಗಿದ್ದ ಅಳಿಯ ಸೈಯದ್ ಮುಹಮ್ಮದ್  ಇಮ್ರಾನ್ ಮೇಲೆ ದೆಹಲಿಯಲ್ಲಿ ಕೌಟಂಬಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು.

ನವದೆಹಲಿ/ಬೆಂಗಳೂರು (ನ.13): ಕಾಂಗ್ರೆಸ್ ನಾಯಕಿ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅಳಿಯನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಹಲಸೂರಿನಲ್ಲಿ ವಾಸವಾಗಿದ್ದ ಅಳಿಯ ಸೈಯದ್ ಮುಹಮ್ಮದ್  ಇಮ್ರಾನ್ ಮೇಲೆ ದೆಹಲಿಯಲ್ಲಿ ಕೌಟಂಬಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು.

ಗುರುವಾರ ದೆಹಲಿ ಪೊಲೀಸರು ಬೆಂಗಳೂರಿಗೆ ಆಗಮಿಸಿದ್ದು, ಇಮ್ರಾನ್’ನನ್ನು  ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡೆಸಿದ್ದರು.  ಆರೋಪಿಯನ್ನು ಬಾಡಿ ವಾರೆಂಟ್ ಮೇರೆಗೆ ಪೊಲೀಸರು ದೆಹಲಿಗೆ ಕರೆದೊಯ್ದಿದ್ದಾರೆ.

ಶೀಲಾ ದೀಕ್ಷಿತ್ ಅವರ ಮಗಳು ಲತಿಕಾ  ಅವರನ್ನು ವಿವಾಹವಾಗಿದ್ದ ಮ್ರಾನ್ 10 ತಿಂಗಳ ಹಿಂದೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರವಾಗಿದ್ದರು. ಆ ಬಗ್ಗೆ ದೆಹಲಿಯ ಬಾರಖಂಬಾ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
ವಿಜಯನಗರ ಕಾಲುವೆಗೆ ನೀರು ಬಿಡುಗಡೆಗೆ ರೈತರ ಹೋರಾಟ: ಜುಲೈ 31ರಂದು ತುಂಗಭದ್ರಾ ಜಲಾಶಯಕ್ಕೆ ಮುತ್ತಿಗೆ