ಕಾಂಗ್ರೆಸ್ ಮುಖಂಡ ಶಶಿ ತರೂರ್ ಆಸ್ಪತ್ರೆಗೆ ದಾಖಲು

By Web DeskFirst Published Apr 15, 2019, 1:21 PM IST
Highlights

ದೇಶದಲ್ಲಿ ಲೋಕಸಭಾ ಮಹಾ ಸಮರ ಆರಂಭವಾಗಿದೆ. ಕೇರಳದಲ್ಲಿ ಚುನಾವಣೆಗೆ ಇನ್ನು ಕೆಲ ದಿನಗಳಷ್ಟೇ ಬಾಕಿ ಉಳಿದಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ನವದೆಹಲಿ : ಕಾಂಗ್ರೆಸ್ ಮುಖಂಡ ಶಶಿ  ತರೂರ್ ದೇವಾಲಯದಲ್ಲಿ ಪೂಜೆ ಸಲ್ಲಿಸುವಾಗ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 

ತಿರುವನಂತಪುರದ ದೇವಾಲಯವೊಂದರಲ್ಲಿ ತುಲಾಭಾರ ಮಾಡಲಾಗಿತ್ತು. ಹಣ್ಣು ಮತ್ತು ಸಿಹಿಯಿಂದ ತುಲಾ ಭಾರ ಮಾಡಲಾಗುತಿತ್ತು. 

ಈ ವೇಳೆ ತಕ್ಕಡಿಯ ಚೈನ್ ತುಂಡಾಗಿ  ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು  ತಕ್ಷಣ ತಿರುವನಂತಪುರದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ಹೊಲಿಗೆ ಹಾಕಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ಹೇಳಿವೆ.

24 ಗಂಟೆಗಳ ಕಾಲ ಶಶಿ ತರೂರ್ ಅವರನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದ್ದು, ಕೊಂಚ ಚೇತರಿಸಿಕೊಂಡಿದ್ದಾರೆ. 

ತಿರುವನಂತಪುರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ಏಪ್ರಿಲ್ 23ರಂದು ಕೇರಳದ  20 ಲೋಕಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. 

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

ದೇವಾಲಯಕ್ಕೆ ತೆರಳುವ ಮುನ್ನ ತರೂರ್ ಚುನಾವಣಾ ಪ್ರಚಾರ ನಡೆಸಿದ್ದರು. ಅಮ್ಮ ಹಾಗೂ ಸಹೋದರಿ  ಚುನಾವಣಾ ಪ್ರಚಾರಕ್ಕೆ ಸಾಥ್ ನೀಡಿದ್ದರು.  

My mother&both sisters joined our paryadanam in Vattiyoorkavu (BJP pls note: three proud & strong Nair women!) Immensely grateful for their unstinting and tireless support, not just through these taxing few weeks of the campaign, but throughout my active life as a public servant. pic.twitter.com/uLyBK5H2VN

— Shashi Tharoor (@ShashiTharoor)
click me!