ಕರ್ತವ್ಯಕ್ಕೆ ಲೇಟ್: ಇನ್ಸ್‌ಪೆಕ್ಟರ್ ನೋಟಿಸ್‌ಗೆ ಪಿಸಿ ಖಡಕ್ ಉತ್ತರ

By Web DeskFirst Published Apr 15, 2019, 12:40 PM IST
Highlights

ಬೆಂಗಳೂರಿನ ಠಾಣೆಯೊಂದರ ಪೊಲೀಸ್ ಇನ್ಸ್ ಪೆಕ್ಟರ್ ನೋಟಿಸ್ ನೀಡಿದ್ದು, ಈ ನೋಟಿಸ್ ಗೆ ಇಲ್ಲಿನ ಪೇದೆ ಪತ್ರದ ಮೂಲಕ ಉತ್ತರ ನೀಡಿದ್ದಾರೆ. 

ಬೆಂಗಳೂರು :  ಪೊಲೀಸ್ ಠಾಣೆಗೆ ತಡವಾಗಿ ಹಾಜರಾದ ಪೇದೆಗೆ ನೋಟಿಸ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಇನ್ಸ್ ಪೆಕ್ಟರ್ ಗೆ ಪೊಲೀಸ್ ಪೇದೆ ಟಾಂಗ್ ನೀಡಿದ್ದಾರೆ. ಜಯನಗರ ಪೊಲೀಸ್ ಇನ್ಸ್ ಪೆಕ್ಟರ್ ಗೆ  ಪೇದೆ ಶ್ರೀದರ್ ಗೌಡ ತಾವು ತಡವಾಗಿ ಠಾಣೆಗೆ ಬರಲು ಕಾರಣವೇನೆಂದು ಪತ್ರ ಬರೆದು ಉತ್ತರ ನೀಡಿದ್ದಾರೆ. 

"ನಿಮ್ಮ ರೀತಿ ಬೆಳಗ್ಗೆ ಸುಖ ಸಾಗರ್ ಅಥವಾ ಯುಡಿ ಹೊಟೇಲ್ ನಲ್ಲಿ ಟಿಫನ್ "  "ಮಧ್ಯಾಹ್ನ ಖಾನಾವಳಿಯಲ್ಲಿ ಊಟ ಮಾಡಿ ರಾತ್ರಿ ಎಂಪೈರ್ ನಲ್ಲಿ ಊಟ , ಮಿಲನೋದಲ್ಲಿ ಐಸ್ ಕ್ರೀಂ ತಿಂದು ನಂತರ ಠಾಣೆಯ ಮೇಲಿರುವ ಕೊಠಡಿಯಲ್ಲಿ ವಾಸವಿದಿದ್ದರೆ ಬೆಳಗ್ಗೆ 8.30 ಕ್ಕೆ ಅಲ್ಲ 8 ಗಂಟೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದೆ. 

ಆದರೆ ನನಗೆ ವಯಸ್ಸಾದ ತಂದೆ ತಾಯಿ ಇದ್ದಾರೆ.  ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಅವರ ಆಗು ಹೋಗುಗಳನ್ನು ಗಮನಿಸಿ ಠಾಣೆಗೆ ಬರಲು ತಡವಾಗುತ್ತಿದೆ. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಇರುವುದಿಲ್ಲ ಎಂದು ಉತ್ತರಿಸಿದ್ದಾರೆ.  

ಪ್ರತಿದಿನ ಬೀಟ್ ಸಿಬ್ಬಂದಿ ತಡವಾಗಿ ಠಾಣೆಗೆ ಆಗಮಿಸುತ್ತಿದ್ದಾರೆ ಎಂದು ಪೇದೆ ಶ್ರೀಧರ್ ಸೇರಿ 5 ಮಂದಿಗೆ ಜಯನಗರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ನೋಟಿಸ್ ನೀಡಿದ್ದರು.  ಈ ನೋಟಿಸ್ ಗೆ ಪೇದೆ ಶ್ರೀದರ್ ಪತ್ರದ ಮೂಲಕ ಇನ್ಸ್ ಪೆಕ್ಟರ್ ಗೆ ಉತ್ತರ ನೀಡಿದ್ದಾರೆ. 

click me!