ಶಬರಿಮಲೆ ದೇಗುಲದ ಹೆಸರು ಬದಲು

By Suvarna Web DeskFirst Published Nov 21, 2016, 6:30 PM IST
Highlights

ಪತ್ತನಂತಿಟ್ಟಜಿಲ್ಲೆಯಲ್ಲಿರುವದೇಗುಲಅಕೃತದಾಖಲೆಗಳಲ್ಲಿಶ್ರೀಧರ್ಮಶಾಸ್ತದೇಗುಲಎಂಬಹೆಸರಿದ್ದರೂಸಾರ್ವಜನಿಕವಾಗಿಅದುಅಯ್ಯಪ್ಪಸ್ವಾಮಿದೇಗುಲಎಂದುಹೆಸರಾಗಿದೆ.

ಕೊಚ್ಚಿ(ನ.21):  ಶಬರಿಮಲೆಯ ದೇಗುಲ ಇನ್ನು ಮುಂದೆ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇಗುಲ ಎಂಬ ಹೊಸ ಹೆಸರಿನಿಂದ ಕರೆಯಲ್ಪಡಲಿದೆ. ಈ ಬಗ್ಗೆ ದೇಗುಲದ ಹೊಣೆ ಹೊತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ ಸೋಮವಾರ ಮಹತ್ವದ ನಿರ್ಣಯ ಕೈಗೊಂಡಿದೆ. ಪತ್ತನಂತಿಟ್ಟ ಜಿಲ್ಲೆಯಲ್ಲಿರುವ ಈ ದೇಗುಲ ಅಕೃತ ದಾಖಲೆಗಳಲ್ಲಿ ಶ್ರೀ ಧರ್ಮಶಾಸ್ತ ದೇಗುಲ ಎಂಬ ಹೆಸರಿದ್ದರೂ ಸಾರ್ವಜನಿಕವಾಗಿ ಅದು ಅಯ್ಯಪ್ಪ ಸ್ವಾಮಿ ದೇಗುಲ ಎಂದು ಹೆಸರಾಗಿದೆ. ಅ.5ರಂದು ನಡೆದಿದ್ದ ದೇವಸ್ವಂ ಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ದೇವಸ್ವಂ ಮಂಡಳಿ ವ್ಯಾಪ್ತಿಯಲ್ಲಿ ಧರ್ಮಶಾಸ್ತಾ ಎಂಬ ಹೆಸರಿನ ದೇಗುಲಗಳು ಹಲವಾರು ಇವೆ. ಆದರೆ ಶಬರಿಮಲೆಯಲ್ಲಿ ಮಾತ್ರ ಅಯ್ಯಪ್ಪ ಸ್ವಾಮಿ ಇರುತ್ತಾರೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದೆ ದೇವಸ್ವಂ ಮಂಡಳಿ.

click me!