
ಬೆಂಗಳೂರು (ಸೆ.20): ನಿನ್ನೆ ನಡುರಾತ್ರಿ ಸಿನಿಮಾ ಶೂಟಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದ ಟಾಲಿವುಡ್ ನಟಿ ಕಾಂಚನಾ ಮೊಯಿತ್ರಾಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ವರದಿಯಾಗಿದೆ.
ಮೊಯಿತ್ರಾ ಅವರ ಕಾರನ್ನು, ಮೂವರು ಕುಡುಕರು ಅಡ್ಡಗಟ್ಟಿ, ಹೊರಗೆಳೆದು ಲೈಂಗಿಕ ಕಿರುಕುಳ ನೀಡಿದ್ದಾರೆ. ನಟಿ ಕಾಂಚನಾ ನೀಡಿರುವ ದೂರಿನ ಆಧಾರದಲ್ಲಿ ಕೋಲ್ಕತ್ತಾ ಪೊಲೀಸರು ಮೂವರು ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ತಡರಾತ್ರಿ 1 ಗಂಟೆಗೆ ಸಿನಿಮಾ ಶೂಟಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದ ಕಾಂಚನಾ ಅವರ ಕಾರು ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಗೆ ತಾಗಿಕೊಂಡು ಸಾಗಿದಾಗ ಅಲ್ಲೇ ಸ್ವಲ್ಪ ಮುಂದೆ, ಕುಡಿದ ಅಮಲಿನಲ್ಲಿದ್ದ, ಮೂರು ವ್ಯಕ್ತಿಗಳು ಕಾರನ್ನು ತಡೆದು, ಕೀಯನ್ನು ಸೆಳೆದುಕೊಂಡು, ಕಾಂಚನಾ ಅವರನ್ನು ಹೊರಗೆಳೆದು ಅವರಿಗೆ ಲೈಂಗಿಕ ಕಿರುಕುಳ ನೀಡಿದರು. ಕಾಂಚನಾ ಅವರು ನಗರದ ನೈಋತ್ಯ ಭಾಗದಲ್ಲಿನ ತಮ್ಮ ಬೆಹಾಲಾ ನಿವಾಸಕ್ಕೆ ತೆರಳುತ್ತಿದ್ದಾಗ ಅವರ ಮೇಲೆ ಈ ದಾಳಿ ನಡೆಯಿತು. "ಕಾಂಚನಾ ಅವರ ದೂರನ್ನು ಆಧರಿಸಿ ನಾವು ಮೂವರಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ; ಮೂರನೇಯವನನ್ನು ಬೇಗನೆ ಸೆರೆ ಹಿಡಿಯಲಿದ್ದೇವೆ' ಎಂದು ಬೆಹಾಲಾ ಡಿಸಿ ಮೀರಜ್ ಖಾಲಿದ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.