
ಬಳ್ಳಾರಿ (ಜೂ.30): ಅವನೊಬ್ಬ ಸರ್ಕಾರಿ ಅಧಿಕಾರಿ. ನೊಂದವರ ಕಷ್ಟಗಳಿಗೆ, ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ಒದಗಿಸುವುದು ಆತನ ಕರ್ತವ್ಯ. ಆದರೆ ಗಣಿನಾಡು ಬಳ್ಳಾರಿ ಜಿಲ್ಲೆಯ ಕಮಲಾಪುರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಕಾಮಪುರಾಣ ಕೇಳಿದ್ರೆ ಶಾಕ್ ಆಗ್ತೀರಾ.? ಸಮಸ್ಯೆ ಹೇಳಲು ಬಂದ ಮಹಿಳೆಯನ್ನ ಮಂಚಕ್ಕೆ ಕರೆದು ವಿವಾದಕ್ಕೆ ಗುರಿಯಾಗಿದ್ದಾನೆ.
ಶಿವಕುಮಾರ್ ಕಟ್ಟಿಮನಿ ಅನ್ನೋ ಅಧಿಕಾರಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಪಟ್ಟಣದ ಆಶ್ರಯ ಕಾಲೋನಿಯ ಪಾರ್ವತಿ ಎನ್ನುವ ಮಹಿಳೆ ತಮ್ಮ ಮನೆಯ ರಸ್ತೆಯಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣವಾಗಿದೆ. ರಸ್ತೆ ಸುಗಮಗೊಳಿಸುವಂತೆ ಅಧಿಕಾರಿಗೆ ಮನವಿ ಮಾಡಿಕೊಂಡಿದ್ದಾಳೆ. ಮಹಿಳೆ ಕಛೇರಿಗೆ ಅಲೆದು ಅಲೆದು ಸುಸ್ತಾಗಿ ಫೋನ್ ಮೂಲಕ ಅಧಿಕಾರಿಗೆ ಮಾತನಾಡಿದಾಗ ಕಾಮುಕ ಅಧಿಕಾರಿ ಅಸಭ್ಯವಾಗಿ ವರ್ತಿಸಿದ್ದಾನೆ. ನೊಂದ ಮಹಿಳೆ ಮೇಲಾಧಿಕಾರಿಗಳಿಗೆ ದೂರು ನೀಡಲು ಹೋದ್ರೆ ಅವರೆಲ್ಲ ನನ್ನ ಸ್ನೇಹಿತರು ನನಗೆ ಎಲ್ಲರ ಬೆಂಬಲವಿದೆ. ನನಗೆ ಸಹಕರಿಸದೆ ಹೋದರೆ ನಿನ್ನ ಮೇಲೆಯೆ ಕೇಸ್ ಹಾಕ್ತೀನಿ ಎಂದು ಬೆದರಿಕೆ ಹಾಕಿದ್ದಾನೆ. ಇನ್ನೂ ಈ ಎಲ್ಲಾ ಸಂಭಾಷಣೆಯನ್ನ ತನ್ನ ಮೊಬೈಲ್ ಫೋನ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಮಹಿಳೆ ಮಾಧ್ಯಮಗಳಿಗೆ ನೀಡಿದ ವಿಷಯ ತಿಳಿದ ಅಧಿಕಾರಿ ಮಹಿಳೆಗೆ ಆಡಿಯೋ ಡಿಲಿಟ್ ಮಾಡುವಂತೆ ಬೆದರಿಕೆ ಹಾಕುತ್ತಿದ್ದಾನಂತೆ. ಅಲ್ಲದೆ ಸಂತ್ರಸ್ತ ಮಹಿಳೆಯ ಸಂಬಂಧಿಕರಿಗೆ ಆಯ್ಕೆಯಾದ ಆಶ್ರಯ ಮನೆಗೆ ಅನುಮೋದನೆ ನೀಡದೇ ತಡೆ ಹಿಡಿದು, ಮಹಿಳೆಯನ್ನ ಸಹಕರಿಸುವಂತೆ ಒತ್ತಾಯಿಸುತ್ತಿದ್ದಾನಂತೆ. ಕಾಮುಕ ಅಧಿಕಾರಿಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.