
ಬೆಂಗಳೂರು(ಜೂ.17): ಯುವತಿಯರೇ ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರ. ಮೈ ಮೇಲೆ ಹಲ್ಲಿ ಎಸೆದು ಲೈಂಗಿಕ ದೌರ್ಜನ್ಯ ಎಸಗುವ ಕಿಡಿಗೇಡಿಗಳಿದ್ದಾರೆ. ಲಿಫ್ಟ್‌ನಲ್ಲಿ ಯುವತಿಯೊಬ್ಬಳ ಮೇಲೆ ಯುವಕನೊಬ್ಬ ಫ್ಲಾಸ್ಟಿಕ್ ಹಲ್ಲಿ ಎಸೆದು ಭಯ ಹುಟ್ಟಿಸಿ ಹಲ್ಲಿ ತೆಗೆಯುವ ನೆಪದಲ್ಲಿ ಆಕೆ ಅಂಗಾಂಗ ಮುಟ್ಟಿಲೈಂಗಿಕ ಕಿರುಕುಳ ನೀಡಿರುವ ಘಟನೆ ನಗರದಲ್ಲಿ ನಡೆದಿದೆ. ಈ ಸಂಬಂಧ ಸಂತ್ರಸ್ತ ಯುವತಿ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬಿಹಾರ ಮೂಲದ 24 ವರ್ಷದ ಯುವತಿ ಕೆಲ ದಿನಗಳ ಹಿಂದೆ ಖಾಸಗಿ ಕಂಪನಿಯಲ್ಲಿ ತರಬೇತಿಗಾಗಿ ನಗರಕ್ಕೆ ಬಂದು ಹೆಸರುಘಟ್ಟಮುಖ್ಯರಸ್ತೆಯ ಚಿಕ್ಕಸಂದ್ರದಲ್ಲಿ ನೆಲೆಸಿದ್ದರು. ಜೂನ್ 15ರ ಬೆಳಗ್ಗೆ 9.30ಕ್ಕೆ ಇಂದಿರಾನಗರದ ಸಿಎಂಎಚ್ ರಸ್ತೆಯ ತಮ್ಮ ಕಚೇರಿ ಲಿಫ್ಟ್‌ನಲ್ಲಿ ತೆರಳುತ್ತಿದ್ದಾಗ ಅಪರಿಚಿತ ಯುವಕನೊಬ್ಬ ಯುವತಿ ಮೇಲೆ ಹಲ್ಲಿ ಎಸೆದಿದ್ದಾನೆ. ಬಳಿಕ ಅದೇ ಹಲ್ಲಿಯನ್ನು ತೆಗೆಯುವ ನೆಪದಲ್ಲಿ ಯುವತಿಯ ಅಂಗಾಂಗಗಳನ್ನು ಮುಟ್ಟಿಕಿರುಕುಳ ನೀಡಿದ್ದು, ನೊಂದ ಯುವತಿ ಕೂಗಿಕೊಂಡಾಗ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಸಂಬಂಧ ಇಂದಿರಾನಗರ ಠಾಣೆಗೆ ಯುವತಿ ದೂರು ಕೊಟ್ಟಿದ್ದು, ಐಪಿಸಿ ಸೆಕ್ಷನ್ 354ರ(ಲೈಂಗಿಕ ದೌರ್ಜನ್ಯ) ಅಡಿ ದೂರು ದಾಖಲಿಸಲಾಗಿದೆ. ಕಂಪನಿ ಕಟ್ಟಡದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳ ದೃಶ್ಯಾವಳಿ ವಶಕ್ಕೆ ಪಡೆದು ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.