ಕಣಿವೆಗೆ ಉರುಳಿದ ಶಾಲಾ ಬಸ್:​ 11 ವಿದ್ಯಾರ್ಥಿಗಳ ದುರ್ಮರಣ

Published : Jun 27, 2019, 06:45 PM ISTUpdated : Jun 27, 2019, 07:35 PM IST
ಕಣಿವೆಗೆ ಉರುಳಿದ ಶಾಲಾ ಬಸ್:​ 11 ವಿದ್ಯಾರ್ಥಿಗಳ ದುರ್ಮರಣ

ಸಾರಾಂಶ

ಜಮ್ಮು-ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ಶಾಲಾ ಟೆಂಪೋ| ಘಟನೆಯಲ್ಲಿ 11 ವಿದ್ಯಾರ್ಥಿಗಳು ಸಾವು, 7 ವಿದ್ಯಾರ್ಥಿಗಳಿಗೆ ಗಂಭೀರ ಗಾಯ|  ಕಾಶ್ಮೀರದ ಶೋಫಿಯಾನ್ ಜಿಲ್ಲೆಯಲ್ಲಿ ನಡೆದ ಘಟನೆ.

ಶ್ರೀನಗರ, [ಜೂ.27]: ಜಮ್ಮ ಮತ್ತು ಕಾಶ್ಮೀರದ ಶೋಪಿಯಾನ್​ ಜಿಲ್ಲೆಯಲ್ಲಿ ಶಾಲಾ ಮಿನಿ ಬಸ್​ವೊಂದು ಕಣಿವೆಗೆ ಉರುಳಿಬಿದ್ದ ಪರಿಣಾಮ 11 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. 

ವಿದ್ಯಾಸಂಸ್ಥೆಯೊಂದರ ಮಿನಿಬಸ್​ ಇಂದು [ಗುರುವಾರ] ಪೂಂಚ್​ನ ಬಫ್ಲಿಯಾಜ್​ನ ಮತ್ತು ಶೋಫಿಯಾನ್​ ಸಂಪರ್ಕಿಸುವ ಮುಘಲ್​ ರಸ್ತೆಯ ಪೀರ್​ ಕಿ ಗಲಿ ಎಂಬಲ್ಲಿ ಕಣಿವೆಗೆ ಉರುಳಿ ಬಿದ್ದಿದೆ. ಪರಿಣಾಮ 9 ವಿದ್ಯಾರ್ಥಿನಿಯರು ಸೇರಿ 11 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.  ಇನ್ನು ಘಟನೆಯಲ್ಲಿ 7 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಶೋಫಿಯಾನ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಮ್ಮು- ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್  ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಫೆಬ್ರವರಿ 28ರಂದು ಅಪರೂಪದ ಖಗೋಳ ವಿದ್ಯಮಾನ; ಆಕಾಶದಲ್ಲಿ ನಡೆಯಲಿದೆ 6 ಗ್ರಹಗಳ ವಿಸ್ಮಯ
Karnataka Weather: ರಾಜ್ಯಾದ್ಯಂತ ಒಣಹವೆ; ದಾವಣಗೆರೆಯಲ್ಲಿ 13 ಡಿಗ್ರಿ ತಾಪಮಾನ ದಾಖಲು