ಪ. ಬಂ ಸರ್ಕಾರಕ್ಕೆ ಹಿನ್ನಡೆ; ದುರ್ಗಾ ಮೂರ್ತಿ ವಿಸರ್ಜನೆಗೆ ರಾತ್ರಿ 12 ಗಂಟೆವರೆಗೆ ಅವಕಾಶ

Published : Sep 21, 2017, 05:58 PM ISTUpdated : Apr 11, 2018, 12:49 PM IST
ಪ. ಬಂ ಸರ್ಕಾರಕ್ಕೆ ಹಿನ್ನಡೆ; ದುರ್ಗಾ ಮೂರ್ತಿ ವಿಸರ್ಜನೆಗೆ ರಾತ್ರಿ 12 ಗಂಟೆವರೆಗೆ ಅವಕಾಶ

ಸಾರಾಂಶ

ಅ.01 ರಂದು ಮೊಹರಂ ಬಂದಿರುವ  ಪ್ರಯುಕ್ತ ಸೆ. 30 ರ ರಾತ್ರಿ 10 ಗಂಟೆ ನಂತರ ದುರ್ಗಾ ಮೂರ್ತಿಯನ್ನು ಮುಳುಗಿಸುವಂತಿಲ್ಲ ಎಂದು ನಿರ್ಬಂಧ ಹೇರಿ ಆದೇಶಿಸಿದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಸೆ. 30 ರ ರಾತ್ರಿ 12 ಗಂಟೆವರೆಗೆ ದುರ್ಗಾಮೂರ್ತಿ ವಿಸರ್ಜನೆಗೆ ಕಲ್ಕತ್ತಾ ನ್ಯಾಯಾಲಯ ಅವಕಾಶ ನೀಡಿದೆ. ಈ ಸಂದರ್ಭದಲ್ಲಿ ಯಾವುದೇ ಗಲಭೆ ಆಗದಂತೆ ಎಚ್ಚರ ವಹಿಸಿ. ಮಾರ್ಗವನ್ನು ನಿಗದಿಪಡಿಸಿ ಎಂದು ಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ.

ಕಲ್ಕತ್ತಾ (ಸೆ.21): ಅ.01 ರಂದು ಮೊಹರಂ ಬಂದಿರುವ  ಪ್ರಯುಕ್ತ ಸೆ. 30 ರ ರಾತ್ರಿ 10 ಗಂಟೆ ನಂತರ ದುರ್ಗಾ ಮೂರ್ತಿಯನ್ನು ಮುಳುಗಿಸುವಂತಿಲ್ಲ ಎಂದು ನಿರ್ಬಂಧ ಹೇರಿ ಆದೇಶಿಸಿದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಸೆ. 30 ರ ರಾತ್ರಿ 12 ಗಂಟೆವರೆಗೆ ದುರ್ಗಾಮೂರ್ತಿ ವಿಸರ್ಜನೆಗೆ ಕಲ್ಕತ್ತಾ ನ್ಯಾಯಾಲಯ ಅವಕಾಶ ನೀಡಿದೆ. ಈ ಸಂದರ್ಭದಲ್ಲಿ ಯಾವುದೇ ಗಲಭೆ ಆಗದಂತೆ ಎಚ್ಚರ ವಹಿಸಿ. ಮಾರ್ಗವನ್ನು ನಿಗದಿಪಡಿಸಿ ಎಂದು ಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ.

ಕಾನೂನು ಸುವ್ಯವಸ್ಥೆ ನೆಪದಲ್ಲಿ ಜನರ ಧಾರ್ಮಿಕ ನಂಬಿಕೆಗಳಿಗೆ ತಡೆಯೊಡ್ಡುವುದು ಸರಿಯಲ್ಲ. ಹಿಂದೂ-ಮುಸಲ್ಮಾನರು ಸಾಮರಸ್ಯದಿಂದ ಬದುಕಲು ಬಿಡಿ. ಅವರಿಬ್ಬರ ನಡುವೆ ಅಂತರವನ್ನು ಸೃಷ್ಟಿ ಮಾಡಬೇಡಿ. ನಿಮ್ಮ ನಿರ್ಧಾರಕ್ಕೆ ಸಮಂಜಸವಾದ ಕಾರಣವನ್ನು ಕೊಡಿ ಎಂದು ಕೋರ್ಟ್ ಮಮತಾ ಸರ್ಕಾರದ ಬಗ್ಗೆ ಗರಂ ಆಗಿದೆ.

ದುರ್ಗಾ ಮೂರ್ತಿ ವಿಸರ್ಜನೆ ಹಾಗೂ ಮೊಹರಂ ಮೆರವಣಿಗೆಗೆ ಬೇರೆ ಬೇರೆ ಮಾರ್ಗಗಳನ್ನು ನಿಗದಿಪಡಿಸಿ. ಎರಡೂ ಮೆರವಣಿಗೆಗಳು ಎದುರುಬದರಾಗದಂತೆ ನೋಡಿಕೊಳ್ಳಿ ಎಂದು ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ.

ಅ.01 ರಂದು ಮೊಹರಂ ಹಿನ್ನಲೆಯಲ್ಲಿ ಸೆ.30 ರಂದು ರಾತ್ರಿ 10 ಗಂಟೆ ನಂತರ ದುರ್ಗಾ ಮೂರ್ತಿ ವಿಸರ್ಜನೆಗೆ ಪಶ್ಚಿಮ ಬಂಗಾಳ ಸರ್ಕಾರ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿ, ಸಂಘ-ಪರಿವಾರ ಹೈಕೋರ್ಟ್ ಮೆಟ್ಟಿಲೇರಿದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನನ್ನ-ಸಿಎಂ ಸಿದ್ದರಾಮಯ್ಯ ನಡುವೆ ಒಪ್ಪಂದವಾಗಿದೆ: ಡಿ.ಕೆ.ಶಿವಕುಮಾರ್ ಹೇಳಿಕೆ ಹಾಟ್ ಟಾಪಿಕ್!
ತೋಷಖಾನಾ–2 ಪ್ರಕರಣ: ಇಮ್ರಾನ್ ಖಾನ್–ಬುಷ್ರಾ ಬೀಬಿಗೆ ತಲಾ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ತಾನ ಕೋರ್ಟ್!