ಮೊದಲ ಬಾರಿಗೆ 35 ಸಾವಿರ ಗಡಿ ದಾಟಿದ ಸೆನ್ಸೆಕ್ಸ್, ನೆಫ್ಟಿ 10 ಸಾವಿರಕ್ಕೆ

By Suvarna Web DeskFirst Published Jan 17, 2018, 4:59 PM IST
Highlights

ಐಟಿ,ಬ್ಯಾಂಕಿಂಗ್ ವಲಯಗಳು ಸೇರಿದಂತೆ ಪ್ರಮುಖ ವಲಯಗಳು ಉತ್ತಮ ಬೆಳವಣಿಗೆ ಕಂಡುಕೊಂಡ ಪರಿಣಾಮ ಸೆನ್ಸ್'ಕ್ಸ್ ದಾಖಲೆ ಗುರಿ ಮುಟ್ಟಿದೆ.

ಮುಂಬೈ(ಜ.17): ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆ'ಕ್ಸ್ ಇದೇ ಮೊದಲ ಬಾರಿಗೆ 35 ಸಾವಿರ ಅಂಕಿ ಅಂಶಗಳ ಗಡಿ ದಾಟಿ ದಾಖಲೆ ನಿರ್ಮಿಸಿದೆ. ನೆಫ್ಟಿ ಕೂಡ 10 ಸಾವಿರ ಮುಟ್ಟಿದೆ.

ಐಟಿ,ಬ್ಯಾಂಕಿಂಗ್ ವಲಯಗಳು ಸೇರಿದಂತೆ ಪ್ರಮುಖ ವಲಯಗಳು ಉತ್ತಮ ಬೆಳವಣಿಗೆ ಕಂಡುಕೊಂಡ ಪರಿಣಾಮ ಸೆನ್ಸ್'ಕ್ಸ್ ದಾಖಲೆ ಗುರಿ ಮುಟ್ಟಿದೆ. ಈ ದಿನದಲ್ಲಿ  35,081 ದಾಖಲಾಗಿ ದಿನದ ಅಂತ್ಯಕ್ಕೆ 31,077ಕ್ಕೆ ಮುಕ್ತಾಯಗೊಂಡಿತು.

ಟಿಸಿಎಸ್, ಇನ್ಫೋ'ಸಿಸ್ ಹಾಗೂ ಹೆಚ್'ಸಿಎಲ್ ಟೆಕ್ನಾಲಾಜಿಸ್ ಕಂಪನಿಗಳು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಹಿನ್ನಲೆಯಲ್ಲಿ 52 ವಾರಗಳ ನಂತರ ಏರಿಕೆ ಕಂಡಿದೆ. ಸೆನ್ಸ್'ಕ್ಸ್ ಏರಿಕೆಯಿಂದ ಆಕ್ಸಿಸ್, ಎಸ್'ಬಿಐ ಹಾಗೂ ಐಸಿಐಸಿಐ ಲಾಭಗಳಿಸಿದರೆ, ವಿಪ್ರೋ, ಹೆಚ್'ಡಿಎಫ್'ಸಿ, ಹೀರೋ ಮೋಟರ್ ಕಾರ್ಪ್ ನಷ್ಟ ಅನುಭವಿಸಿದವು.

click me!