ಪೋಷಕರನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಪಿತ್ರಾರ್ಜಿತ ಆಸ್ತಿಯೂ ಇಲ್ಲ: ಹೈಕೋರ್ಟ್!

By Web DeskFirst Published Oct 5, 2018, 3:45 PM IST
Highlights

ಪೋಷಕರ ಪಾಲನೆ ಮಕ್ಕಳ ಕರ್ತವ್ಯ! ಪೋಷಕರನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಪಿತ್ರಾರ್ಜಿತ ಆಸ್ತಿ ಇಲ್ಲ! ದೆಹಲಿ ಹೈಕೋರ್ಟ್ ನಿಂದ ಮಹತ್ವದ ತೀರ್ಪು! ಪಿತ್ರಾರ್ಜಿತ ಆಸ್ತಿಯಿಂದ ಮಕ್ಕಳನ್ನು ಹೊರಗಿಡುವ ಹಕ್ಕು ಪೋಷಕರಿಗೆ

ನವದೆಹಲಿ(ಅ.5): ಮಕ್ಕಳು ತಮ್ಮ ಪಾಲನೆ ಸರಿಯಾಗಿ ಮಾಡದಿದ್ದಾಗ ಪೋಷಕರು ಪಿತ್ರಾರ್ಜಿತ ಆಸ್ತಿಯನ್ನು ಅವರಿಗೆ ವರ್ಗಾಯಿಸದೇ ಇರಬಹುದು ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮಹಿಳೆಯೊಬ್ಬಳು ತನ್ನ ಅತ್ತೆ-ಮಾವನಿಗೆ ಕಿರುಕುಳ ನೀಡಿದ ಕುರಿತಾದ ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್, ಪಿತ್ರಾರ್ಜಿತ ಆಸ್ತಿಯನ್ನೂ ಮಕ್ಕಳಿಗೆ ವರ್ಗಾಯಿಸದೇ ಇರುವ ಹಕ್ಕನ್ನು ಪೋಷಕರು ಹೊಂದಿದ್ದಾರೆ ಎಂದು ಹೇಳಿದೆ. ಅಲ್ಲದೇ ಕೂಡಲೇ ಪೋಷಕರಿಗೆ ಸೇರಿದ ಒಂದನೇ ಮಹಡಿಯ ಮನೆಯನ್ನು ತೊರೆಯುವಂತೆ ಮಹಿಳೆಗೆ ಕೋರ್ಟ್ ಆದೇಶ ನೀಡಿದೆ.

ಹಿರಿಯ ಜೀವಗಳು ನೆಮ್ಮದಿಯಿಂದ ಬದುಕುವ ವಾತಾವರಣ ಕಲ್ಪಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಸ್ವಂತ ಮಕ್ಕಳೇ ಪೋಷಕರನ್ನು ಸರಿಯಾಗಿ ನೋಡಿಕೊಳ್ಳದಿದ್ದಾಗ  ಪಿತ್ರಾರ್ಜಿತ ಮತ್ತು ಸ್ವಯಾರ್ಜಿತ ಎರಡೂ ಬಗೆಯ ಆಸ್ತಿಯಿಂದ ಅವರನ್ನು ಹೊರಗಿಡುವ ಹಕ್ಕನ್ನು ಪೋಷಕರು ಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿದೆ.

click me!