ಸಿಡ್ನಿ ವಿಮಾನ ನಿಲ್ದಾಣದಲ್ಲಿ ಪರ್ಸ್‌ ಕದ್ದ ಏರ್ ಇಂಡಿಯಾ ಪೈಲಟ್ ಅಮಾನತು!

By Web DeskFirst Published Jun 24, 2019, 11:26 AM IST
Highlights

ಸಿಡ್ನಿ ವಿಮಾನ ನಿಲ್ದಾಣದಲ್ಲಿ ಪರ್ಸ್‌ ಕದ್ದ ಆರೋಪಕ್ಕಾಗಿ ಏರ್ ಇಂಡಿಯಾ ನೌಕರ ಮನೆಗೆ!| ಪೈಲಟ್‌ ಮತ್ತು ಪ್ರಾಂತೀಯ ನಿರ್ದೇಶಕರೂ ಆಗಿರುವ ರೋಹಿತ್‌ ಭಾಸಿನ್‌ ಹುದ್ದೆಯಿಂದ ಅಮಾನತು

ನವದೆಹಲಿ[ಜೂ.24]: ಏರ್‌ ಇಂಡಿಯಾದ ಹಿರಿಯ ಪೈಲಟ್‌ ಒಬ್ಬರು, ಆಸ್ಪ್ರೇಲಿಯಾದ ವಿಮಾನ ನಿಲ್ದಾಣದಲ್ಲಿ ಪರ್ಸ್‌ ಕದ್ದು ಗಂಭೀರ ಆರೋಪಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಏರ್ ಇಂಡಿಯಾ, ಕಳ್ಳತನದ ಆರೋಪಕ್ಕೆ ಗುರಿಯಾಗಿರುವ ಪೈಲಟ್‌ ಮತ್ತು ಪ್ರಾಂತೀಯ ನಿರ್ದೇಶಕರೂ ಆಗಿರುವ ರೋಹಿತ್‌ ಭಾಸಿನ್‌ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಿದೆ. ಜೊತೆಗೆ ಪ್ರಕರಣ ಕುರಿತು ತನಿಖೆಗೂ ಆದೇಶಿಸಿದೆ.

2019ರ ಜೂನ್‌ 22ರಂದು ಭಾಸಿನ್‌ ಅವರು ಸಿಡ್ನಿ ವಿಮಾನ ನಿಲ್ದಾಣದಲ್ಲಿನ ಸುಂಕರಹಿತ ಮಳಿಗೆಯೊಂದರಲ್ಲಿ ಪರ್ಸ್‌ ಕದ್ದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣವೇ ಅವರನ್ನು ಭಾರತಕ್ಕೆ ಮರಳುವ ವಿಮಾನದ ಪೈಲಟ್‌ ಕರ್ತವ್ಯದಿಂದಲೂ ವಿಮುಕ್ತಗೊಳಿಸಲಾಗಿತ್ತು.

click me!