
ಕಾವೇರಿ ನಿರ್ವಹಣಾ ಪ್ರಾಧಿಕಾರದ ಸಭೆ ಮುಗಿದ ನಂತರ ಕೇಂದ್ರ ಜಲ ಆಯೋಗದ ಅಧ್ಯಕ್ಷರನ್ನು ಮುತ್ತಿಕೊಂಡ ತಮಿಳು ಪತ್ರಕರ್ತರು ಉಳಿದೆಲ್ಲವನ್ನೂ ಬಿಟ್ಟು ಕರ್ನಾಟಕ ನಿಮ್ಮ ಆದೇಶ ಪಾಲಿಸುತ್ತಿಲ್ಲ ಅಲ್ಲವೇ? ಕರ್ನಾಟಕ ಉದ್ಧಟತನ ತೋರಿಸುತ್ತಿದೆಯೇ? ಕರ್ನಾಟಕ ಮತ್ತೆ ಸುಪ್ರೀಂಕೋರ್ಟ್‌ಗೆ ಹೋಗುವುದೇಕೆ ಎಂದೆಲ್ಲ ಪ್ರಶ್ನೆಗಳ ಸುರಿಮಳೆಗೈದರು. ‘ಇಲ್ಲ ಹಾಗೇನೂ ಆಗಿಲ್ಲ. ಪುಷ್ಕಳ ಮಳೆ ಬಂದಿದೆ. ನೀರು ಸಹಜವಾಗಿ ಹರಿದು ಹೋಗುತ್ತಿದೆ. ನೀರು ಬಿಡಲು ಕರ್ನಾಟಕದ ತಕರಾರು ಏನಿಲ್ಲ’ ಎಂದರೂ ತಮಿಳು ಪತ್ರಕರ್ತರು ಸುಮ್ಮನಾಗುತ್ತಿರಲಿಲ್ಲ. ಕೇಳುವಷ್ಟು ಕೇಳಿದ ಕನ್ನಡದ ಒಬ್ಬ ಪತ್ರಕರ್ತೆ, ‘ನೀವು ಸುದ್ದಿ ವಾಹಕರೋ ಬೆಂಕಿ ಹಚ್ಚುವವರೋ’ ಎಂದಾಗ ತಮಿಳು ಪತ್ರಕರ್ತರು ಸುಮ್ಮನಾದರು.
[ಪ್ರಶಾಂತ್ ನಾತು ಅವರ ಅಂಕಣದ ಆಯ್ದ ಭಾಗ]
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.