
ಬೆಲ್'ಗ್ರೇಡ್(ಜು.03): ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಕೋಟಿಗೊಬ್ಬ -3 ಚಿತ್ರದ ಸಾಹಸ ದೃಶ್ಯದ ಶೂಟಿಂಗ್ ಸರ್ಬಿಯಾ ದೇಶದ ರಾಜಧಾನಿ ಬೆಲ್'ಗ್ರೇಡ್'ನಲ್ಲಿ ನಡೆಯುತ್ತಿದೆ.
ಕಾರಿನ ಚೇಸಿಂಗ್ ದೃಶ್ಯಗಳನ್ನು ಸಾಹಸ ನಿರ್ದೇಶಕ ಅನಲರಸು ಅದ್ಭುತವಾಗಿ ಚಿತ್ರೀಕರಿಸುತ್ತಿದ್ದಾರೆ. ಸ್ಟಂಟ್ ದೃಶ್ಯದಲ್ಲಿ ಸ್ವತಃ ಸುದೀಪ್ ಅವರೆ ವೇಗವಾಗಿ ಚಲಿಸಿಕೊಂಡು ಹತ್ತಾರು ಅಡಿ ಮೇಲಿಂದ ಹಾರುವ ದೃಶ್ಯ ಮಾತ್ರ ಕಣ್ಮನ ಸೆಳೆಯುವಂತಿದೆ. ಕಿಚ್ಚನ ಸಾಹಸಕ್ಕೆ ಸ್ಟಂಟ್ ಮಾಸ್ಟರ್ ಕೂಡ ಬೆರಗಾಗಿದ್ದಾರೆ.
ಸಿನಿಮಾ ದೃಶ್ಯಗಳನ್ನು ಟ್ವಿಟರ್ ನಲ್ಲಿ ಶೇರ್ ಮಾಡಿರುವ ಸುದೀಪ್ ತಮಗಾದ ಅನುಭವ ಹಾಗೂ ಸಾಹಸ ನಿರ್ದೇಶಕ ಅನಲರಸು ಅವರ ಕಾರ್ಯವನ್ನು ಮೆಚ್ಚಿ ಶ್ಲಾಘಿಸಿದ್ದಾರೆ.
ಸೂರಪ್ಪ ಬಾಬು ನಿರ್ಮಿಸುತ್ತಿರುವ ಕೋಟಿಗೊಬ್ಬ- 3 ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ಶಿವ ಕಾರ್ತಿಕ್. ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು ಸುದೀಪ್, ಮಡ್ಡೋನ ಸೆಬಾಸ್ಟಿಯನ್ , ಶ್ರದ್ಧಾ ದಾಸ್, ಬಾಲಿವುಡ್ ನಟ ಅಪ್ತಾಬ್ ಶಿವದಾಸಿನಿ ಪ್ರಮುಖ ತಾರಾ ಬಳಗದಲ್ಲಿದ್ದಾರೆ. ಈ ವರ್ಷದ ಡಿಸೆಂಬರ್'ನಲ್ಲಿ ರಾಜ್ಯಾದ್ಯಂತ ಸಿನಿಮಾ ತೆರೆ ಕಾಣಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.