ನೋ ಈಟಿಂಗ್ ಓನ್ಲಿ ಮೀಟಿಂಗ್ : ಪ್ರಧಾನಿ ಖಡಕ್ ಆದೇಶ

By Web DeskFirst Published Jul 17, 2018, 5:26 PM IST
Highlights
  • ಸಭೆಯ ಮಧ್ಯದಲ್ಲಿ ತಿಂಡಿ ಕೊಡುವುದರಿಂದ ಏಕಾಗ್ರತೆಗೆ ಭಂಗ ಸಾಧ್ಯತೆಯ ಕಾರಣ ತಿಂಡಿ ನೀಡದಿರಲು ಪ್ರಧಾನಿ ಆದೇಶ
  • ಅಧಿಕಾರಿಗಳು ಪೆನ್ನು ಪೇಪರ್ ಸಮೇತ ಬಂದು ಮೀಟಿಂಗ್‌ಗೆ ಹಾಜರಾಗಬೇಕು

ಪ್ರಧಾನಿ ನರೇಂದ್ರ ಮೋದಿ ನಡೆಸುವ ಸಭೆಗಳಲ್ಲಿ ಮಧ್ಯೆ ಮಧ್ಯೆ ಟೀ, ಬಿಸ್ಕತ್ತು, ಸಮೋಸಾ ಕೊಡುವ ಪದಟಛಿತಿಯೇ ಇಲ್ಲವಂತೆ. ಸಭೆಗೆ ಬರುವಾಗಲೇ ನಿಮ್ಮ ನಿಮ್ಮ ತಿಂಡಿ ತೀರ್ಥ ಮುಗಿಸಿಕೊಂಡು ಬರಬೇಕು, ಸಭೆಯ ಮಧ್ಯದಲ್ಲಿ ತಿಂಡಿ ಕೊಡುವುದರಿಂದ ಏಕಾಗ್ರತೆಗೆ ಭಂಗ ಬರುತ್ತದೆ ಎಂದು ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳಿಗೆ ಸ್ವಯಂ ಪ್ರಧಾನಿಯೇ ಸೂಚಿಸಿದ್ದಾರಂತೆ. ಮಂತ್ರಿಗಳಾಗಲಿ, ಅಧಿಕಾರಿಗಳಾಗಲಿ ಎಲ್ಲರಿಗೂ ನಿಯಮ ಒಂದೇ.

ನಿಮ್ಮ ನಿಮ್ಮಮನೆಗಳಿಂದ ತಿಂಡಿ ತಿಂದು ಬರಬೇಕು. ಪೆನ್ನು ಪೇಪರ್ ಸಮೇತ ಬಂದು ಮೀಟಿಂಗ್‌ಗೆ ಹಾಜರಾಗಬೇಕು. ಇನ್ನು, ಸಭೆಯಲ್ಲಿ ಹೆಚ್ಚು ಮಾತನಾಡುವುದು ಮೋದಿ ಮಾತ್ರ ಎಂದು ಬೇರೆ ಹೇಳಬೇಕಿಲ್ಲ.

ಅವಿಶ್ವಾಸದ ಕಥೆ ಏನು?

ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು ಸಲ್ಲಿಸಿದ್ದ ಅವಿಶ್ವಾಸ ಗೊತ್ತುವಳಿ ಆಂಧ್ರದ ಸಂಸದರ ಗದ್ದಲದ ಕಾರಣದಿಂದ ಚರ್ಚೆಗೆ ಬಂದಿರಲಿಲ್ಲ. ನಾಳೆಯಿಂದ ಆರಂಭ ಆಗಲಿರುವ ಮಾನ್ಸೂನ್ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ಚರ್ಚೆಗೆ ತೆಗೆದುಕೊಂಡರೆ ಮಾತ್ರ ಸದನ ನಡೆಯಲು ಸಹಕಾರ ನೀಡುತ್ತೇವೆ ಎಂದು ಕಾಂಗ್ರೆಸ್ ಕಡೆಯಿಂದ ಸರ್ಕಾರಕ್ಕೆ ಸ್ಪಷ್ಟವಾಗಿ ಹೇಳಲಾಗಿದ್ದು, ಈಗ ಅವಿಶ್ವಾಸ ಗೊತ್ತುವಳಿಯನ್ನು ತೆಗೆದುಕೊಳ್ಳಬೇಕೆ ಇಲ್ಲವೇ ಎಂಬುದನ್ನು ಮೋದಿ ಸಾಹೇಬರು ನಿರ್ಧರಿಸಬೇಕಿದೆ.

[ಕನ್ನಡಪ್ರಭ - ಪ್ರಶಾಂತ್ ನಾತೂ ಅವರ ಅಂಕಣದ ಆಯ್ದ ಭಾಗ ]

ಇ ಪೇಪರ್'ನಲ್ಲೂ ಸುದ್ದಿ ಓದಿ: ನೋ ಈಟಿಂಗ್ ಓನ್ಲಿ ಮೀಟಿಂಗ್ : ಪ್ರಧಾನಿ ಖಡಕ್ ಆದೇಶ 

click me!