ನಾಯಕರ ಒತ್ತಡ ತಂತ್ರ : ಕಾಂಗ್ರೆಸಿಗೆ ಗೆಲುವು ಕಷ್ಟ

By Web DeskFirst Published Jul 17, 2018, 4:59 PM IST
Highlights
  • ರಾಜಸ್ಥಾನದಲ್ಲಿ ಮೈತ್ರಿ ಮಾಡಿಕೊಂಡರೆ ಮಾತ್ರ ಮಧ್ಯಪ್ರದೇಶದಲ್ಲಿ ಹೊಂದಾಣಿಕೆ ಎನ್ನುತ್ತಿರುವ ಮಾಯಾವತಿ
  • ಮಾಯಾವತಿಯ ಬೆಂಬಲವಿಲ್ಲದಿದ್ದರೆ ಮಧ್ಯಪ್ರದೇಶದಲ್ಲಿ ಬಿಜೆಪಿ ಸೋಲಿಸಲು ಕಾಂಗ್ರೆಸಿಗೆ ಕಷ್ಟ

ರಾಜಸ್ಥಾನದಲ್ಲಿ ನಮ್ಮ ಜೊತೆ ಮೈತ್ರಿ ಮಾಡಿಕೊಂಡರೆ ಮಾತ್ರ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಸೀಟು ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದು ರಾಹುಲ್ ಗಾಂಧಿಗೆ ಮಾಯಾವತಿ ಸ್ಪಷ್ಟವಾಗಿ ಹೇಳಿದ್ದು, ಕಾಂಗ್ರೆಸ್ ದ್ವಂದ್ವದಲ್ಲಿದೆ. ಮಧ್ಯಪ್ರದೇಶದಲ್ಲಿ ಶಿವರಾಜ ಸಿಂಗ್ ಚೌಹಾಣ್‌ರನ್ನು ಸೋಲಿಸಬೇಕಾದರೆ ಮಾಯಾವತಿ ಯ ಸಹಾಯ ಬೇಕೇ ಬೇಕು.

ಹೀಗಾಗಿ ಇಲ್ಲಿ ಕಾಂಗ್ರೆಸ್ ಮಾಯಾವತಿ ಜೊತೆಗೆ ಹೋಗಲು ತಯಾರಿದೆ. ಆದರೆ ರಾಜಸ್ಥಾನದಲ್ಲಿ ವಸುಂಧರಾ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದು, ಅಲ್ಲಿ ಕಾಂಗ್ರೆಸ್‌ಗೆ ಮಾಯಾವತಿ ಜೊತೆ ಹೋಗುವ ಅಗತ್ಯ ಕಾಣುತ್ತಿಲ್ಲ. ಆದರೆ ಸಿಕ್ಕಿರುವ ಅವಕಾಶ ಉಪಯೋಗಿಸುತ್ತಿರುವ ಮಾಯಾವತಿ, ತನ್ನ ವೋಟ್ ಕಟವಾ ಇಮೇಜ್ ಬಳಸಿಕೊಂಡು ಕಾಂಗ್ರೆಸ್ ಮೇಲೆ ಎಲ್ಲ ಕಡೆ ಮೈತ್ರಿ ಮಾಡಿಕೊಳ್ಳುವಂತೆ ಒತ್ತಡ ಹಾಕುತ್ತಿದ್ದಾರೆ.

[ಕನ್ನಡಪ್ರಭ - ಪ್ರಶಾಂತ್ ನಾತೂ ಅವರ ಅಂಕಣದ ಆಯ್ದ ಭಾಗ ]

ಈಪೇಪರ್ ನಲ್ಲೂ ಸುದ್ದಿ ಓದಿ : ನಾಯಕರ ಒತ್ತಡ ತಂತ್ರ : ಕಾಂಗ್ರೆಸಿಗೆ ಗೆಲುವು ಕಷ್ಟ

click me!