ಎಸ್.ಎಂ.ಕೃಷ್ಣ ಸಿಎಂ ಆಗುವ ಗುಟ್ಟು ಗೊತ್ತಿದ್ದು ಒಬ್ಬರಿಗೆ ಮಾತ್ರ: ಎಸ್.ಎಂ. ರಾಜ್ಯಸಭಾ ಸದಸ್ಯರಾಗಿದ್ದು ಗೌಡರಿಂದ ?

Published : Aug 08, 2017, 11:46 PM ISTUpdated : Apr 11, 2018, 12:49 PM IST
ಎಸ್.ಎಂ.ಕೃಷ್ಣ ಸಿಎಂ ಆಗುವ ಗುಟ್ಟು ಗೊತ್ತಿದ್ದು ಒಬ್ಬರಿಗೆ ಮಾತ್ರ: ಎಸ್.ಎಂ. ರಾಜ್ಯಸಭಾ ಸದಸ್ಯರಾಗಿದ್ದು ಗೌಡರಿಂದ ?

ಸಾರಾಂಶ

ಎಸ್.ಎಂ. ರಾಜ್ಯಸಭಾ ಸದಸ್ಯರಾಗಿದ್ದು ಗೌಡರಿಂದ ?

ಡಿ.ಕೆ. ಶಿವಕುಮಾರ್ ಸುಮಾರು 10 ವರ್ಷಗಳ ಹಿಂದೆ ದೆಹಲಿಯಲ್ಲಿ ಮನೆ ತೆಗೆದುಕೊಳ್ಳಬೇಕೆಂದು ತೀರ್ಮಾನ ಮಾಡಿದಾಗ ತನ್ನನ್ನು ರಾಜಗುರು ಎಂದು ಕರೆದುಕೊಳ್ಳುವ ದ್ವಾರಕಾನಾಥ್ ಅವರನ್ನು ಕರೆದುಕೊಂಡು ಬಂದು ವಾಸ್ತು ನೋಡಿದ ಮೇಲೆಯೇ ಮನೆ ಫೈನಲ್ ಮಾಡಿದರು.

ಕಳೆದ ವಾರ ರೇಡ್ ಆದ ಸಫ್ಜರ್'ಜಂಗ್ ಎಂಕ್ಲೇವ್'ನಲ್ಲಿರುವ ಮನೆಯನ್ನು ದ್ವಾರಕಾನಾಥ್ ಅವರೆ ಆಯ್ಕೆ ಮಾಡಿದ್ದು. 1999ರಲ್ಲಿ  ದೇವೇಗೌಡರ ಸಹಾಯದಿಂದ ಎಸ್.ಎಂ. ಕೃಷ್ಣ ರಾಜ್ಯಸಭಾ ಸದಸ್ಯರಾದ ನಂತರ ಹೈಕಮಾಂಡ್ ನಾಯಕರ ಮನೆ ಮನೆಗಳಿಗೆ ಎಡತಾಕಿ ರಾಜಶೇಖರ್ ಮೂರ್ತಿ ಬೇಡ ಕೃಷ್ಣರನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ಓಡಾಡಿದ್ದವರಲ್ಲಿ ಶಿವಕುಮಾರ್ ಕೂಡ ಒಬ್ಬರು . ರಾಜ್ಯದಲ್ಲಿ ಅಷ್ಟೇನು ಜನಪ್ರಿಯರಲ್ಲದ ಕೃಷ್ಣರನ್ನು ಅಧ್ಯಕ್ಷರನ್ನಾಗಿ ಮಾಡಿ ಏನು ಮಾಡುತ್ತೀರಿ ಎಂದು ಆಗಿನ ದೆಹಲಿಯ ಕನ್ನಡ ಪತ್ರಕರ್ತರು ಕೇಳಿದಾಗ ಶಿವಕುಮಾರ್ ಕೊಟ್ಟ ಉತ್ತರ 'ಜಾತಕ ತೋರಿಸಿದ್ದೇನೆ, ರೀ ಮುಂದೆ ಅವರೇ ಮುಖ್ಯಮಂತ್ರಿಯಾಗುತ್ತಾರೆ. ಅದಕ್ಕೆ ಈಗಿನಿಂದಲೇ ಜೊತೆಗಿದ್ದೇನೆ'ಎಂದು ಉತ್ತರ ಕೊಟ್ಟಿದ್ದರಂತೆ.

- ಪ್ರಶಾತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ (ಕನ್ನಡಪ್ರಭ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು